Download Our App

Follow us

Home » ಭಾರತ » ಬಿಜೆಪಿ ರಾಷ್ಟ್ರಾಧ್ಯಕ್ಷರಾಗ್ತಾರಾ ಪ್ರಲ್ಲಾದ ಜೋಶಿ ! ಜೋಶಿಯವರ ಹೆಸರು ಮುಂಚೂಣಿಯಲ್ಲಿ

ಬಿಜೆಪಿ ರಾಷ್ಟ್ರಾಧ್ಯಕ್ಷರಾಗ್ತಾರಾ ಪ್ರಲ್ಲಾದ ಜೋಶಿ ! ಜೋಶಿಯವರ ಹೆಸರು ಮುಂಚೂಣಿಯಲ್ಲಿ

ಬಿಜೆಪಿಯ ದೆಹಲಿ ನಾಯಕರು ಮತ್ತು ಸಂಘ ಪರಿವಾರದ ಜೊತೆಗೆ, ಉತ್ತಮ ಬಾಂಧವ್ಯವನ್ನು ಹೊಂದಿರುವ ಕೇಂದ್ರ ಸಚಿವ ಜೋಶಿಯವರ ಹೆಸರು ಬಿಜೆಪಿ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ಕೇಳಿ ಬರುತ್ತಿದೆ.

ಹಾಲಿ ಅಧ್ಯಕ್ಷರಾಗಿರುವ ಜೆಪಿ ನಡ್ಡಾ ಅವರು ಕೇಂದ್ರದಲ್ಲಿ ಆರೋಗ್ಯ ಇಲಾಖೆಯನ್ನೂ ನಿಭಾಯಿಸುತ್ತಿದ್ದು, ಅವರ ಅವಧಿ ಮುಗಿದ ಹಿನ್ನೆಲೆಯಲ್ಲಿ, ಬಿಜೆಪಿ ಹೊಸ ಅಧ್ಯಕ್ಷರ ನೇಮಕಕ್ಕೆ ಮುಂದಾಗಿದೆ.

ಇನ್ನು ಕೆಲವು ರಾಜ್ಯಗಳಿಗೆ ಬಿಜೆಪಿ ಅಧ್ಯಕ್ಷರನ್ನು ನೇಮಕ ಮಾಡಬೇಕಿದ್ದು, ಡಿಸೆಂಬರ್ ಅಂತ್ಯದ ವೇಳೆಗೆ ಬಿಜೆಪಿ ಹೈಕಮಾಂಡ ನೂತನ ರಾಷ್ಟ್ರೀಯ ಅಧ್ಯಕ್ಷರ ನೇಮಕ ಮಾಡಲಿದೆ ಎನ್ನಲಾಗಿದೆ. 

ಹೊಸ ರಾಷ್ಟ್ರೀಯ ಅಧ್ಯಕ್ಷರ ಚುನಾವಣೆಯನ್ನು ಇನ್ನೂ ಹೆಚ್ಚುದಿನ ಮುಂದಕ್ಕೆ ಹಾಕುವುದಿಲ್ಲ ಎನ್ನಲಾಗಿದ್ದು, ನಿನ್ನೇ ರಕ್ಷಣಾ ಸಚಿವ ರಾಜನಾಥಸಿಂಗ ಅವರ ಮನೆಯಲ್ಲಿ ಮಹತ್ವದ ಸಭೆ ನಡೆದಿದೆ.

ರಾಜ್ಯ ಬಿಜೆಪಿ ಅಧ್ಯಕ್ಷರಾಗಿ, ಕೇಂದ್ರ ಸಚಿವರಾಗಿ ಸಂಘ ಪರಿವಾರದವರಿಗೆ ಹತ್ತಿರವಾಗಿರುವ ಪ್ರಲ್ಲಾದ ಜೋಶಿಯವರ ಹೆಸರು ಸಂಭಾವ್ಯ ಪಟ್ಟಿಯಲ್ಲಿದೆ ಎನ್ನಲಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

error: Content is protected !!