ಪಶ್ಚಿಮ ಪದವೀಧರ ಕ್ಷೇತ್ರದ ಅಭ್ಯರ್ಥಿ ಎಸ್.ವಿ. ಸಂಕನೂರ ಅವರ ಪರವಾಗಿ ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಅವರು ಬಿರುಸಿನ ಪ್ರಚಾರ ಆರಂಭಿಸಿದ್ದಾರೆ.
ಇಂದು ಬೆಳಗ್ಗೆಯಿಂದ ಬಂಡಿವಾಡ, ಶಿರಗುಪ್ಪಿ ಹಾಗೂ ಅಣ್ಣಿಗೇರಿಯಲ್ಲಿ ಪ್ರಚಾರ ನಡೆಸಿದ ಅವರು, ಸಂಕನೂರ ಅವರ ಗೆಲುವಿಗೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ರಾಚಯ್ಯ ಹಿರೇಮಠ, ಮೃತ್ಯುಂಜಯ ಹಿರೇಮಠ, ತಾಲೂಕು ಅಧ್ಯಕ್ಷ ಮಂಜುನಾಥ ಗಣಿ, ಚೈತ್ರಾ ಶಿರೂರ, ವೀರಭದ್ರಗೌಡ್ರ ಭರಮನಗೌಡ್ರ, ಶಂಭು ಮೆಣಸಿನಕಾಯಿ, ರೋಹಿತ ಮತ್ತಿಹಳ್ಳಿ,
ಮಂಜು ಗಡಿಯಣ್ಣನವರ, ಫಕ್ಕೀರಪ್ಪ ಚಾಕಲಬ್ಬಿ, ಮುತ್ತು ಕೊಳ್ಳಿ, ದುಂಡಪ್ಪ ಶೆಟ್ಟರ, ಗಂಗಪ್ಪ ದುಂದೂರ, ನಾಗರಾಜ ಕಾಳಿ, ಪ್ರವೀಣ ನಾಗರಹಳ್ಳಿ ಹಾಗೂ ಮುದಕಣ್ಣ ಆಲೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Author: Karnataka Files
Views: 370




