ಧಾರವಾಡದ ನೆಹರು ಮಾರ್ಕೆಟ್ ಅಕ್ಷರಷ: ಗಬ್ಬು ನಾರುತ್ತಿದೆ. ಬಸ್ ಸ್ಟ್ಯಾಂಡ ಅಕ್ಕಪಕ್ಕದ ಬಾರ್ ಗಳಲ್ಲಿನ ಖಾಲಿ ಟೆಟ್ರಾ ಪ್ಯಾಕ್ ಗಳ ದೊಡ್ಡ ರಾಶಿಯೇ ಇಲ್ಲಿ ಕಾಣಸಿಗುತ್ತದೆ.

ರಾತ್ರಿ ಆದ್ರೆ ಸಾಕು ಖಾಲಿ ಸಾರಾಯಿ ಪ್ಯಾಕೇಟ್ ಗಳನ್ನು ಇಲ್ಲಿ ತಂದು ಬಿಸಾಕುತ್ತಾರೆ. ಭರ್ಜರಿ ವ್ಯಾಪಾರ ಮಾಡುವ ಬಾರ್ ಮಾಲೀಕರು, ಖಾಲಿ ಪ್ಯಾಕೇಟ್ ಗಳನ್ನ ಬೇರೆಡೆ ಹಾಕುವದನ್ನು ಬಿಟ್ಟು ಮನಸೋ ಇಚ್ಛೆ ರಸ್ತೆಯಲ್ಲಿ ಒಗೆಯುತ್ತಾರೆ.
ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿಯಾಗಿದೆ. ಆದರೆ ಧಾರವಾಡ ಮಾತ್ರ ಡರ್ಟಿ ಸಿಟಿಯಾಗಿದೆ. ಎಲ್ಲೆಂದರಲ್ಲಿ ಕಸ ಚೆಲ್ಲುವ ಬಾರ್ ಮಾಲೀಕರ ಮೇಲೆ ಕ್ರಮ ಕೈಗೊಂಡು ದಂಡ ಹಾಕಬೇಕಾದ ಪಾಲಿಕೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವದು ದುರ್ದೈವದ ಸಂಗತಿ. ಇನ್ನು ಬೀದಿ ನಾಯಿಗಳು ಮತ್ತು ದನಕರುಗಳು ಇಲ್ಲಿ ಬಿದ್ದಿರುವ ಖಾಲಿ ಸಾರಾಯಿ ಪ್ಯಾಕೇಟಗಳನ್ನ ಜಾಲಾಡಿ, ಕಸವನ್ನು ಮತ್ತಷ್ಟು ಹರಡುತ್ತವೆ.

Author: Karnataka Files
Post Views: 2





