ಶಾಮನೂರು ಶಂಕರಪ್ಪನವರ ಲಿಂಗಾಯತ ಅಧಿಕಾರಿಗಳು ನಿರ್ಲಕ್ಷದ ಹೇಳಿಕೆ, ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಬಿರುಗಾಳಿ ಎಬ್ಬಿಸಿದೆ. ಪಕ್ಷಕ್ಕೆ ಆಗುವ ಡ್ಯಾಮೇಜ್ ಕಂಟ್ರೋಲ್ ಗಾಗಿ ಕೈ ಹೈಕಮಾಂಡ ಮುಂದಾಗಿರುವ ಬೆನ್ನಲ್ಲೇ, ಮತ್ತೊಬ್ಬ ಕಾಂಗ್ರೇಸ್ ನಾಯಕ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ. ಮುಸ್ಲಿಮರು ಶೇಕಡಾ 80%, ಮತ್ತು ಶೇಕಡಾ 20ರಷ್ಟು ಲಿಂಗಾಯತರು ಕಾಂಗ್ರೇಸಿಗೆ ಮತ ಹಾಕಿದ್ದಾರೆ. 80ರಷ್ಟು ಮತ ಹಾಕಿದ ಮುಸ್ಲಿಮರಿಗೆ ಎರಡು ಮಂತ್ರಿ ಸ್ಥಾನ, ಶೇಕಡಾ 20ರಷ್ಟು ಮತ ಹಾಕಿದ ಲಿಂಗಾಯತರಿಗೆ 7 ಮಂತ್ರಿ ಎಂದು ಕಾಂಗ್ರೇಸ್ ನಾಯಕ ಸ್ಥಾನ ರಾಠೋಡ ಹೇಳಿಕೆ ನೀಡಿದ್ದಾರೆ.
ಶಿವಶಂಕರಪ್ಪನವರು ಪಕ್ಷದ ಹಿರಿಯ ನಾಯಕರು, 7 ಬಾರಿ ಕಾಂಗ್ರೇಸ್ಸಿನಿಂದ ಆಯ್ಕೆಯಾಗಿದ್ದಾರೆ ಎಂದ ಪ್ರಕಾಶ ರಾಠೋಡ್, ಶಿವಶಂಕರಪ್ಪನವರ ಹೇಳಿಕೆಯಿಂದ ನೋವಾಗಿದೆ. ಸಿದ್ದರಾಮಯ್ಯ ಸರ್ಕಾರ ಎಲ್ಲಾ ವರ್ಗಕ್ಕೆ ನ್ಯಾಯ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. ಪ್ರಕಾಶ ರಾಠೋಡ ಹೇಳಿಕೆ ಬೆಂಕಿಗೆ ತುಪ್ಪ ಸುರಿ ನೀರು.
Author: Karnataka Files
Post Views: 2





