ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಹೊನ್ನಶೆಟ್ಟಿಹಳ್ಳಿ ಗ್ರಾಮದ ಹೊರ ವಲಯದಲ್ಲಿ ಸ್ವಾಮಿಜಿಗಳು ಕಾಲಲ್ಲಿ ಧರಿಸುವ ಪಾದುಕೆ ಹಾಗು ದಂಡ ಪತ್ತೆಯಾಗಿವೆ. 12 ಜೊತೆ ಪಾದುಕೆ ಮತ್ತು 28 ದಂಡಗಳ ದಿಡೀರ್ ಪ್ರತ್ಯಕ್ಷದಿಂದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿದೆ.

ಹಾಸನ ಜಿಲ್ಲೆ ಅರಸೀಕೆರೆ ತಾಲೋಕಿನ ಹೊನ್ನಶೆಟ್ಟಿಹಳ್ಳಿ ಬಳಿ ಈ ಘಟನೆ ನಡೆದಿದೆ. ವಿಶಾಲ ಪ್ರದೇಶದಲ್ಲಿ ಸರತಿ ಸಾಲಿನಲ್ಲಿಜೋಡಿಸಿ ಇಡಲಾಗಿರೋ ಪಾದುಕೆ ಹಾಗು ದಂಡಗಳನ್ನು ನೋಡಲು ಜನ ಮುಗಿಬಿದ್ದಿದ್ದಾರೆ. ಸನ್ಯಾಸಿಗಳು ಬಳಸೋ ವಸ್ತುಗಳನ್ನ ಕಂಡು ಜನರು ಆತಂಕಗೊಂಡಿದ್ದಾರೆ.
ರಾತ್ರೋ ರಾತ್ರಿ ಗ್ರಾಮದ ಸಮೀಪ 12 ಜೊತೆ ಪಾದುಕೆ ಹಾಗು 28 ದಂಡ ಪ್ರತ್ಯಕ್ಷವಾಗಿದ್ದು, ಯಾರಾದ್ರು ಸ್ವಾಮಿಗಳ ತಂಡ ಬಂದು ಬಿಟ್ಟು ಹೋಗಿದ್ದಾರೋ ಅಥವಾ ಏನಾದ್ರು ಪೂಜೆಗಾಗಿ ಹೀಗೆ ಮಾಡಲಾಗಿದೆಯೆ ಎಂಬ ಬಗ್ಗೆ ಅನುಮಾನ ಶುರುವಾಗಿದೆ.
Author: Karnataka Files
Post Views: 2





