ಸುಳಿವು, ಬಿಟ್ಟು ಕೊಡದ ಹಾಗೆ ನಡೆದಿರುವ ಅತ್ಯಂತ ಕಠಿಣ ಪ್ರಕರಣಗಳನ್ನು ಚಾಣಾಕ್ಷತನದಿಂದ ಪತ್ತೆ ಹಚ್ಚಿರುವ ಕೀರ್ತಿ ಧಾರವಾಡ ಪೊಲೀಸ್ ರಿಗೆ ಸಲ್ಲುತ್ತದೆ. ಧಾರವಾಡದ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆಯಬಾರದ್ದು ನಡೆದು ಹೋಗಿದೆ. ಧಾರವಾಡದ ಕುರುಬರ ಓಣಿಯ ಮುಸ್ಲಿಂ ಯುವತಿಯನ್ನು ಕಿಡ್ನಾಪ್ ಮಾಡಿದ ಯುವಕರ ತಂಡ ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಶಹರ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಈ ಘಟನೆ, ಸಮಾಜದಲ್ಲಿ ತಲ್ಲಣ ಮೂಡಿಸಿದೆ. ಸುಸಂಸ್ಕೃತ ನಗರಿ ಧಾರವಾಡ, ಹಿಂಗ್ಯಾಕೆ ಆಗ್ತಿದೆ ಎಂದು ಪ್ರಜ್ಞಾವಂತರು ಪ್ರಶ್ನಿಸುತ್ತಿದ್ದಾರೆ. ಧಾರವಾಡ ಶಹರ ಠಾಣೆಗೆ ಇನ್ಸಪೆಕ್ಟರ ಆಗಿ ಬಂದಿರುವ ನಾಗೇಶ ಕಾಡದೇವರಮಠ ದಕ್ಷ ಅಧಿಕಾರಿ ಎಂದೇ ಹೆಸರಾದವರು. ಸತ್ಯ ಬಯಲಿಗೆಳೆದು, ಯುವತಿಯ ಜೊತೆ ಅಮಾನುಷವಾಗಿ ನಡೆದುಕೊಂಡಿರುವ ಕಿಚಕರಿಗೆ ಪಾಠ ಕಲಿಸುತ್ತಾರೆ ಅನ್ನೋ ನಂಬಿಕೆ ಎಲ್ಲರದ್ದು.
Author: Karnataka Files
Post Views: 2





