Download Our App

Follow us

Home » ರಾಜಕೀಯ » ಬಿಜೆಪಿ ಸಾಹುಕಾರರ ಪಾರ್ಟಿ. ಪಾರ್ಟಿ ಅಸೆಟ್ ಎಂಟುವರೆ ಸಾವಿರ ಕೋಟಿ.

ಬಿಜೆಪಿ ಸಾಹುಕಾರರ ಪಾರ್ಟಿ. ಪಾರ್ಟಿ ಅಸೆಟ್ ಎಂಟುವರೆ ಸಾವಿರ ಕೋಟಿ.

ಈ ದೇಶದಲ್ಲಿ ಮತ್ತೆಂದೂ ಮೋದಿ ಸರ್ಕಾರ ಬರಲ್ಲ. ಇಂಡಿಯಾ ಒಕ್ಕೂಟ ಬಲಶಾಲಿಯಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು 75 ವರ್ಷದ ಇತಿಹಾಸದಲ್ಲಿ ಕಾಂಗ್ರೇಸ್ ಪಕ್ಷಕ್ಕೆ 600 ಕೋಟಿ ದೇಣಿಗೆ ಹಣ ಶೇಖರಣೆಯಾಗಿಲ್ಲ. ಆದರೆ ಕೇವಲ 9 ವರ್ಷಗಳ ಅವಧಿಯಲ್ಲಿ ಬಿಜೆಪಿ ಪಕ್ಷಕ್ಕೆ 8500 ಕೋಟಿ ಹಣ ದೇಣಿಗೆ ಬಂದಿದೆ ಎಂದು ಆರೋಪಿಸಿದರು. ಕೊರೋನಾ ಸಂದರ್ಭದಲ್ಲಿ ಪಿ ಎಮ್ ಕೇರ್ ಫಂಡಗೆ 30 ಸಾವಿರ ಕೋಟಿ ಹಣ ಬಂದಿದೆ. ಬಂದ ಹಣದಲ್ಲಿ ಬಿಜೆಪಿ ಕ್ರಿಕೇಟ್ ಸ್ಟೇಡಿಯಂ ಕಟ್ಟಲಾಗಿದೆ ಹೊರತು ಒಂದು ಆಸ್ಪತ್ರೆಯನ್ನು ಸಹ ಕಟ್ಟಿಲ್ಲ ಎಂದು ಲಾಡ್ ಆರೋಪಿಸಿದರು. ಜನತೆಗೆ ಎಲ್ಲವು ಗೊತ್ತಾಗಿದ್ದು, ಲೋಕಸಭಾ ಚುನಾವಣೆಗೆ ಕಾಂಗ್ರೇಸ್ ಸಿದ್ಧತೆ ಆರಂಭ ಮಾಡಿದೆ ಎಂದರು. ಇದೆ ವೇಳೆ ಬಿಜೆಪಿ ಸಾಹುಕಾರರ ಪಾರ್ಟಿಯಾಗಿದೆ ಎಂದರು. ದೇಶದ ಜನರಿಗೆ ಯಾರದು ಸಾಹುಕಾರರ ಪಾರ್ಟಿ, ಯಾರದು ಬಡವರ ಪಾರ್ಟಿ ಎಂದು ಗೊತ್ತಾಗಿದೆ ಎಂದರು.

Karnataka Files
Author: Karnataka Files

Leave a Comment

RELATED LATEST NEWS

Top Headlines

ಹುಬ್ಬಳ್ಳಿ ಗ್ರಾಮೀಣ ಪೊಲೀಸರ ಕಾರ್ಯಾಚರಣೆ : ಇಬ್ಬರು ಸುಲಿಗೆಕೋರರ ಬಂಧನ

ಹುಬ್ಬಳ್ಳಿಯ ದೇವರಗುಡಿಹಾಳದಿಂದ ರೇವಡಿಹಾಳಕ್ಕೆ ಹೋಗುವ ರಸ್ತೆಯಲ್ಲಿ ಕಾರಿನಲ್ಲಿ ಕುಳಿತಿದ್ದ ದಂಪತಿಗಳನ್ನು ಕೆಳಗೆ ಇಳಿಸಿ ಬಂಗಾರದ ಆಭರಣ ದೋಚಿದ್ದ ಇಬ್ಬರು ಸುಲಿಗೆಕೋರರನ್ನು ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಹೆಡೆಮುರಿಗೆ ಕಟ್ಟಿದ್ದಾರೆ.

Live Cricket

error: Content is protected !!