ರಾಜ್ಯದಲ್ಲಿ ಆಡಳಿತ ಮತ್ತು ವಿರೋದ ಪಕ್ಷಗಳ ವಾಕ್ಸಮರಕ್ಕೆ ಕಾರಣವಾಗಿದ್ದ FDA ಪರೀಕ್ಷೆ ಆಕ್ರಮದ ರೂವಾರಿ ಆರ್ ಡಿ ಪಾಟೀಲನನ್ನು ಪೊಲೀಸರು ಬಂಧಿಸಿದ್ದಾರೆ. ಹಿಂದೆ ಪಿ ಎಸ್ ಐ ಪರೀಕ್ಷೆಯಲ್ಲಿಯೂ ಆಕ್ರಮದ ಆರೋಪ ಹೊತ್ತಿದ್ದ ಆರ್ ಡಿ ಪಾಟೀಲ ಇದೀಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ್ದ FDA ಪರೀಕ್ಷೆಯಲ್ಲಿ ಆಕ್ರಮದ ರೂವಾರಿ ಈತನೇ ಎಂದು ಹೇಳಲಾಗಿದೆ. ಪರೀಕ್ಷೆಯಲ್ಲಿ ಆಕ್ರಮ ಎಸಗಿದವರು ಆರ್ ಡಿ ಪಾಟೀಲ ಹೆಸರನ್ನು ಹೇಳಿದ್ದಾರೆ ಎನ್ನಲಾಗಿದ್ದು, ಪ್ರಕರಣ ಬಯಲಿಗೆ ಬಂದ ನಂತರ ಆರ್ ಡಿ ಪಾಟೀಲ ತಲೆ ಮರೆಸಿಕೊಂಡಿದ್ದ. ಮಹಾರಾಷ್ಟ್ರದ ಸಂಬಂದಿಕರ ಮನೆಯಲ್ಲಿ ತಂಗಿದ್ದ ಆರ್ ಡಿ ಪಾಟೀಲನನ್ನು ಕಲಬುರಗಿ ಪೋಲಿಸರು ಬಂಧಿಸಿ, ಕರೆ ತರುತ್ತಿದ್ದಾರೆ.
Author: Karnataka Files
Post Views: 6





