ಗದುಗಿನ ಯುವ ನ್ಯಾಯವಾದಿ ಎಸ್ ಕೆ ನದಾಫ್ ಅವರು ಬರೆದ ಸಿವಿಲ್ ನ್ಯಾಯಧೀಶರ ಮುಖ್ಯ ಪರೀಕ್ಷೆಗೆ ಸಂಬಂದಿಸಿದ ಪುಸ್ತಕವನ್ನು ಕಾನೂನು ಸಚಿವ ಎಚ್ ಕೆ ಪಾಟೀಲ ಲೋಕಾರ್ಪಣೆಗೊಳಿಸಿದರು. ಕನ್ನಡದಲ್ಲಿ ಕಾನೂನಿನ ಪುಸ್ತಕ ಬರೆದು ನ್ಯಾಯಾಧೀಶರಾಗುವ ಯುವ ವಕೀಲರಿಗೆ, ಎಸ್ ಕೆ ನದಾಫ್ ಅವರು ಉತ್ತಮ ಗ್ರಂಥ ಅರ್ಪಿಸಿದ್ದಾರೆ ಎಂದರು. ನ್ಯಾಯವಾದಿ ಮಿತ್ರರು ತಪಸ್ಸಿನ ರೀತಿಯಲ್ಲಿ ಅಧ್ಯಯನಶೀಲರಾದಾಗ ಗೆಲವು ಸಾಧ್ಯ ಎಂದರು. ಬೆಂಗಳೂರಿನ ಕರ್ನಾಟಕ ಲಾ ರಿಪೋರ್ಟರ್ಸ್ ಪಬ್ಲಿಕೇಶನ್ ಈ ಪುಸ್ತಕವನ್ನು ಹೊರ ತಂದಿದ್ದು, ಎಸ್ ಕೆ ನದಾಫ್ ಅವರು ಅನೇಕ ಕನ್ನಡದಲ್ಲಿ ಕಾನೂನು ಪುಸ್ತಕಗಳನ್ನು ಬರೆದಿದ್ದಾರೆ. ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪುಸ್ತಕದ ಲೇಖಕರಾದ ಎಸ್ ಕೆ ನದಾಫ್, ಎಚ್ ಕೆ ಪಾಟೀಲರ ವಿಶೇಷ ಕರ್ತವ್ಯಾಧಿಕಾರಿ ಲತಿಫ್ ಕುನ್ನಿಭಾವಿ, ಪ್ರಕಾಶಕ ವಿ ತ್ಯಾಗರಾಜ, ನ್ಯಾಯವಾದಿ ಕುಶವಂತಕುಮಾರ, ತುಳಸಿಗೇರಿ ಹಾಗೂ ಬೆಳ್ಳೆಪ್ಪ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
Author: Karnataka Files
Post Views: 213





