ಅಣ್ಣಿಗೇರಿಯಲ್ಲಿ ನಿನ್ನೇ ರಾತ್ರಿ ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುವ ಅಧಿಕಾರಿ ಮೇಲೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಲಾಗಿದೆ. ಕಂದಾಯ ಇಲಾಖೆಯ ಅಧಿಕಾರಿ ರಿಷಿ ಸಾರಂಗ ಎಂಬುವವರ ಮೇಲೆ ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಡಿ ಓ ಆಗಿರುವ ಪೊಲೀಸ್ ಪೇದೆ, ಮಂಜು ನಾಗಾವಿ ಎಂಬುವವರು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ನಿನ್ನೇ ರಾತ್ತಿ ಊಟ ಮುಗಿಸಿಕೊಂಡು ನಿಂತಿದ್ದ ರಿಷಿ ಸಾರಂಗ, ಮಂಜು ನಾಗಾವಿಯವರ ವಾಹನದ ಮೇಲೆ ನೀರಿನ ಬಾಟಲ್ ಇಟ್ಟು, ಸ್ನೇಹಿತರ ಜೊತೆ ಮಾತನಾಡುತ್ತಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ತಮ್ಮ ವಾಹನದ ಮುಂದೆ ಬಂದ ಪೊಲೀಸ್ ಪೇದೆ ಮಂಜು ನಾಗಾವಿ, ನೀರಿನ ಬಾಟಲ್ ಇಟ್ಟಿದ್ದ ರಿಷಿ ಸಾರಂಗರಿಗೆ ಅಶ್ಲೀಲ ಪದ ಬಳಕೆ ಮಾಡಿದ್ದಾರೆ. ರಿಷಿ ಸಾರಂಗ ಸ್ವಾರಿ ಎಂದು ಹೇಳುವಷ್ಟರಲ್ಲಿ ಮಂಜು ನಾಗಾವಿ ಏಕಾಏಕಿ, ರಿಷಿ ಮೇಲೆ ಹಲ್ಲೆ ಮಾಡಿದ್ದಾರೆ.
ಹಲ್ಲೆ ಮಾಡಿದ್ದರ ಪರಿಣಾಮ, ರಿಷಿಗೆ ಕಿವಿಯಲ್ಲಿ ರಕ್ತ ಬಂದಿದೆ. ತಕ್ಷಣ ಅಣ್ಣಿಗೇರಿ ಸರ್ಕಾರಿ ಆಸ್ಪತ್ರೆಗೆ ಹೋದ ರಿಷಿ ಎಮ್ ಎಲ್ ಸಿ ಮಾಡಿಸಿದ್ದಾರೆ. ಈ ವಿಷಯ ಗೊತ್ತಾಗುತ್ತಿದ್ದಂತೆ ಮಂಜು ಸಹ ಆಸ್ಪತ್ರೆಗೆ ಹೋಗಿ ಕೈಗೆ ನೋವಾಗಿದೆ ಎಂದು ಹೇಳಿ, ಆಸ್ಪತ್ರೆಗೆ ಧಾಖಲಾಗಿದ್ದಾರೆ. ವಿಷಯ ತಿಳಿದ ಅಣ್ಣಿಗೇರಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರು ಹಾಗೂ ಇನ್ನಿತರರು ಕಂದಾಯ ಅಧಿಕಾರಿ ಮೇಲೆ ಹಲ್ಲೆ ಮಾಡಿದ್ದರ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಕ್ಷುಲ್ಲಕ ಕಾರಣಕ್ಕಾಗಿ ನಡೆದ ಹಲ್ಲೆ ಖಂಡಿಸಿದ್ದಾರೆ.
ಮಂಜು ನಾಗಾವಿ, ನವಲಗುಂದ ಶಾಸಕ ಎನ್ ಎಚ್ ಕೋನರೆಡ್ಡಿಯವರ ಸಂಬಂಧಿ ಎಂದು ಹೇಳಿಕೊಂಡು ಅಣ್ಣಿಗೇರಿಯಲ್ಲಿ ದರ್ಪ ಮೆರೆಯುತ್ತಿದ್ದಾರೆ ಎಂದು ಅಣ್ಣಿಗೇರಿ ಸಾರ್ವಜನಿಕರು ಆರೋಪಿಸಿದ್ದಾರೆ. ಅಣ್ಣಿಗೇರಿಯಲ್ಲಿ ಮಂಜು ನಾಗಾವಿ ಹೆದರಿಕೆ ಹುಟ್ಟಿಸಿದ್ದು, ಸುಖಾ ಸುಮ್ಮನೆ ಬಲ ಪ್ರಯೋಗ ಮಾಡುತ್ತಿದ್ದಾರೆ ಎನ್ನಲಾಗಿದೆ. ಮಂಜು ನಾಗಾವಿಯನ್ನು ಅಮಾನತ್ ಮಾಡುವಂತೆ ಆಗ್ರಹಿಸಿದ್ದಾರೆ. ಧಾರವಾಡ ಜಿಲ್ಲೆಯ ದಕ್ಷ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾಗಿರುವ ಡಾ. ಗೋಪಾಲ ಬ್ಯಾಕೋಡರವರು ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳದೆ ಹೋದರೆ, ಅಣ್ಣಿಗೇರಿ ಠಾಣೆಯ ಗೌರವ ಹರಾಜುವಾಗುವದರಲ್ಲಿ ಎರಡು ಮಾತಿಲ್ಲ.





