ಧಾರವಾಡ ಜಿಲ್ಲೆಯಲ್ಲಿ ಎರಡನೇ ಅತೀ ದೊಡ್ಡ ಸಂಸ್ಥೆಯಾಗಿರುವ ಧಾರವಾಡ ಅಂಜುಮನ್ ಸಂಸ್ಥೆಯ ಚುನಾವಣೆಗೆ ಅಖಾಡ ಸಜ್ಜಾಗಿದೆ. ಎರಡು ಬಾರಿ ಅಧ್ಯಕ್ಷರಾಗಿ ಅಂಜುಮನ್ ಯಶಸ್ವಿಯಾಗಿ ನಡೆಸಿರುವ ಇಸ್ಮಾಯಿಲ್ ತಮಟಗಾರ ಮತ್ತೆ ಈ ಸಲ ಮೈದಾನಕ್ಕೆ ಇಳಿಯಲು ಸಜ್ಜಾಗಿದ್ದಾರೆ. ಶಾಸಕನಾಗುವ ಎಲ್ಲ ಅರ್ಹತೆ ಇರುವ ಇಸ್ಮಾಯಿಲ್ ತಮಟಗಾರ ಉತ್ತರ ಕರ್ನಾಟಕದ ಮುಸ್ಲಿಂ ಸಮಾಜದ ನಾಯಕರಾಗಿ ಹೊರಹೊಮ್ಮಿದ್ದಾರೆ. ಮುಸ್ಲಿಂ ಸಮಾಜದ ಮೇಲೆ ದೌರ್ಜನ್ಯ, ದಬ್ಬಾಳಿಕೆ ನಡೆದಾಗ ಎದೆಕೊಟ್ಟು ನಿಲ್ಲುವ ಇಸ್ಮಾಯಿಲ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಮೂರು ಬಾರಿ ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದಿಂದ ವಿಧಾನ ಸಭೆಗೆ ಸ್ಪರ್ಧಿಸಿದ್ದ ಇಸ್ಮಾಯಿಲ್, ಈ ಬಾರಿ ವಿಧಾನ ಪರಿಷತ್ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಅಂಜುಮನ್ ಸಂಸ್ಥೆಗೆ ಸದಸ್ಯತ್ವ ನೋಂದಣಿ ಆರಂಭವಾಗಿದ್ದು, ಸದಸ್ಯತ್ವಕ್ಕೆ 560 ರೂಪಾಯಿ, ಆಜೀವ ಸದಸ್ಯತ್ವಕ್ಕೆ 10 ಸಾವಿರ ರೂಪಾಯಿ ನಿಗದಿ ಮಾಡಲಾಗಿದೆ. ಕಳೆದ ಸಲ ಇದ್ದ 160 ಎಮ್ ಸಿ ಮೆಂಬರಗಳ ಸಂಖ್ಯೆ 80 ಕ್ಕೆ ಇಳಿಸಲಾಗಿದೆ.
Author: Karnataka Files
Post Views: 2





