ಕುಡಿದ ಮತ್ತಿನಲ್ಲಿ ಚಾಲಕನೊಬ್ಬ ರೈಲ್ವೆ ಹಳಿಗಳ ಮೇಲೆ ಲಾರಿ ನಿಲ್ಲಿಸಿದ ಘಟನೆ ಲೂಧಿಯಾನದಲ್ಲಿ ನಡೆದಿದೆ. ಲೂಧಿಯಾನದ ರೈಲ್ವೆ ಹಳಿ ಮೇಲೆ ಟ್ರಕ್ ನಿಲ್ಲಿಸಿದ್ದು, ಲೋಕೋ ಪೈಲಟ್ ಸಮಯಪ್ರಜ್ಞೆಯಿಂದಾಗಿ ಭಾರೀ ಅನಾಹುತವೊಂದು ತಪ್ಪಿದೆ. ಈ ಮಾರ್ಗದಲ್ಲಿ ರೈಲು ಬರುತ್ತಿದ್ದ ಸಮಯದಲ್ಲಿ 8 ನಿಮಿಷಗಳ ಹಿಂದೆ ಚಾಲಕ ಟ್ರಕ್ನ್ನು ಹಳಿ ಮೇಲೆ ನಿಲ್ಲಿಸಿದ್ದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಟ್ರಕ್ ಕಂಡ ಕೂಡಲೇ ಲೋಕೋಪೈಲಟ್ ರೈಲು ನಿಧಾನಗೊಳಿಸಿದ್ದಾರೆ. ಹಾಗೂ ಟ್ರಕ್ನಿಂದ ಕೆಲವು ಮೀಟರ್ ದೂರದಲ್ಲೇ ರೈಲನ್ನು ನಿಲ್ಲಿಸಿ, ಅಪಘಾತವನ್ನು ತಪ್ಪಿಸಿದ್ದಾರೆ. ಪರಾರಿಯಾಗಿದ್ದ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
Author: Karnataka Files
Post Views: 2





