ರಾಜಧಾನಿ ಬೆಂಗಳೂರಿನಲ್ಲಿ ಅನೇಕ ಅಪರಾಧಿಕ ಪ್ರಕರಣಗಳನ್ನು ಪತ್ತೆ ಹಚ್ಚಿದ್ದ ಪೊಲೀಸ್ ಶ್ವಾನ ಪೂರ್ವಿ ಅನಾರೋಗ್ಯದಿಂದ ಮೃತಪಟ್ಟಿದೆ. ಸಿಎಆರ್ ಸೌತ್ ಶ್ವಾನದಳದ ಮೌಲ್ಯಯುತ ಸದಸ್ಯೆ ಪೂರ್ವಿ ಅವರನ್ನು ಬೀಳ್ಕೊಡುವಾಗ ನಮ್ಮ ಹೃದಯ ಭಾರವಾಗಿದೆ. ಕರ್ತವ್ಯದ ಸಾಲಿನಲ್ಲಿ ಮತ್ತು ಅದರಾಚೆಗೆ, ಪೂರ್ವಿಯ ಅಚಲ ಬದ್ಧತೆ ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ. ಪೂರ್ವಿಯ ಆತ್ಮವು ಮುಕ್ತವಾಗಲಿ ಎಂದು ಬೆಂಗಳೂರು ಮಹಾನಗರ ಪೊಲೀಸ್ ಇಲಾಖೆ ಎಕ್ಸ್ ನಲ್ಲಿ ಬರೆದುಕೊಂಡಿದೆ.

ಕರ್ತ್ಯವ್ಯದಲ್ಲಿ ಶೃದ್ದೆ ತೋರಿದ್ದ ಪೂರ್ವಿ ನಿಧನಕ್ಕೆ ಅನೇಕ ಹಿರಿಯ ಪೊಲೀಸ್ ಅಧಿಕಾರಿಗಳು ಕಂಬನಿ ಮಿಡಿದಿದ್ದಾರೆ. ಮೃತ ಪೂರ್ವಿ ಅಂತ್ಯಕ್ರೀಯೆಯನ್ನು ಸಕಲ ಸರ್ಕಾರಿ ಮರ್ಯಾದೆಗಳೊಂದಿಗೆ ಇಂದು ನಡೆಸಲಾಯಿತು.
Author: Karnataka Files
Post Views: 2





