ಗದಗ ಜಿಲ್ಲೆಯ ಹರ್ಲಾಪುರ ಗ್ರಾಮದ ಜಮೀನೊಂದರಲ್ಲಿ ಹೊಲ ಕಾಯುತ್ತಿದ್ದ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಬಾಲಪ್ಪ ಕೊಪ್ಪದ ಎಂಬುವವರ ಜಮೀನಿನಲ್ಲಿ ಕಳೆದ ಒಂದು ವರ್ಷದಿಂದ ಜಮೀನು ಕಾಯುವ ಕೆಲಸ ಮಾಡುತ್ತಿದ್ದ ಕೊಪ್ಪಳ ಜಿಲ್ಲೆ ಮಾಳೆಕೊಪ್ಪ ಗ್ರಾಮದ ಸಣ್ಣಹನುಮಂತಪ್ಪ ವಜ್ರದ ಎಂಬಾತನ ಕತ್ತು ಕೊಯ್ದು ಕೊಲೆ ಮಾಡಲಾಗಿದೆ.
ಜಮೀನಿನಲ್ಲಿ ಬೆಳೆದ ಮೆಣಸಿನಕಾಯಿ ಬೆಳೆಯನ್ನು ಕಾಯುತ್ತಿದ್ದ ಸಣ್ಣಹನುಮಂತಪ್ಪ ಮಲಗಿರುವಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಸ್ಥಳಕ್ಕೆ ಗದಗ ಗ್ರಾಮೀಣ ಪೊಲೀಸರು ಭೇಟಿ ಕೊಟ್ಟಿದ್ದು, ಈ ಕೊಲೆಯನ್ನು ಮೆಣಸಿನಕಾಯಿ ಕಳ್ಳರು ಮಾಡಿದ್ದಾರೋ ಅಥವಾ ಬೇರೆ ದ್ವೇಷವೇನಾದರು ಇದೆಯಾ ಎಂಬುವದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ
Author: Karnataka Files
Post Views: 2





