ಅಯೋಧ್ಯೆ ಕರಸೇವಾ ಯಾತ್ರೆಯ ಸಂದರ್ಭದಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಹುಬ್ಬಳ್ಳಿಯ ಶ್ರೀಕಾಂತ ಪೂಜಾರಿ ಎಂಬುವವನ ಬಂಧನ ದೊಡ್ಡ ರಾದ್ದಾಂತಕ್ಕೆ ಕಾರಣವಾಗಿದೆ. ಶ್ರೀಕಾಂತ ಕೃಷ್ಣಪ್ಪಾ ಪೂಜಾರಿ ಬಂಧನ ಖಂಡಿಸಿ, ಬಿಜೆಪಿ ಇಂದು ಹುಬ್ಬಳ್ಳಿಯಲ್ಲಿ ಬ್ರಹತ್ ಪ್ರತಿಭಟನೆ ನಡೆಸುತ್ತಿದೆ. ಹುಬ್ಬಳ್ಳಿಯ ಶಹರ ಠಾಣೆಯ ಮುಂದೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದು, ವಿರೋದ ಪಕ್ಷದ ನಾಯಕ ಆರ್ ಅಶೋಕ ಭಾಗವಹಿಸಿದ್ದಾರೆ.
ಅಷ್ಟಕ್ಕೂ ಶ್ರೀಕಾಂತ ಪೂಜಾರ ಮೇಲಿರುವ ಕೇಸುಗಳು ಯಾವವು, ಯಾವ ಯಾವ ಕೇಸುಗಳು ಯಾರಾರು ಮುಖ್ಯಮಂತ್ರಿಗಳಿದ್ದಾಗ ನಡೆದಿವೆ ಎನ್ನುವದರ ಬಗ್ಗೆ ಧಾಖಲೆಗಳು ಕರ್ನಾಟಕ ಫೈಲ್ಸ್ ಗೆ ಲಭ್ಯವಾಗಿವೆ. ಅವುಗಳನ್ನು ಒಂದೊಂದಾಗಿ ನೋಡುತ್ತಾ ಹೋಗೋದಾದರೆ,
ಶ್ರೀಕಾಂತ ಕೃಷ್ಣಪ್ಪಾ ಪೂಜಾರ ವಿರುದ್ಧ ಧಾಖಳಾಗಿದ್ದ ಕೇಸುಗಳ ಪಟ್ಟಿ ಇಲ್ಲಿದೆ.

ಜೆ ಎಚ್ ಪಟೇಲ, ಬಿ ಎಸ್ ಯಡಿಯೂರಪ್ಪ, ಎಚ್ ಡಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿಯೂ ಶ್ರೀಕಾಂತ ಪೂಜಾರಿ ಮೇಲೆ ಕೇಸುಗಳು ಧಾಖಲಾಗಿರುವದು ಧಾಖಲೆಗಳಿಂದ ಗೊತ್ತಾಗುತ್ತದೆ.
ಇನ್ನು ಪೊಲೀಸ್ ಕಮಿಷನರ್ ಹೇಳುವಂತೆ ಲಾಂಗ್ ಪೆಂಡಿಂಗ್ ಕೇಸಗಳನ್ನು ವಿಲೇವಾರಿ ಮಾಡುವ ಸಂದರ್ಭದಲ್ಲಿ, ಹುಬ್ಬಳ್ಳಿ ಗಲಭೆಗೆ ಸಂಬಂಧಿಸಿದಂತೆ ಶ್ರೀಕಾಂತ ಪೂಜಾರಿಯನ್ನು ಬಂಧನ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದು, ಬೇರೆ ಬೇರೆ ಅಪರಾಧಕ್ಕೆ ಸಂಬಂಧಿಸಿದಂತೆ ಹಳೇಯ ಕೇಸುಗಳಲ್ಲಿ ತಪ್ಪಿಸಿಕೊಂಡಿರುವ ಅನೇಕರನ್ನು ಬಂಧಿಸಲಾಗಿದೆ ಎಂದು ಖುದ್ದು ಹುಬ್ಬಳ್ಳಿ ಧಾರವಾಡ ಪೊಲೀಸರು ಕಮಿಷನರ್ ರೇಣುಕಾ ಸುಕುಮಾರ ತಿಳಿಸಿದ್ದಾರೆ. ಅಷ್ಟಕ್ಕೂ ಶ್ರೀಕಾಂತ ಮೇಲೆ ಅಬಕಾರಿ ಕಾಯ್ದೆಗೆ ಸಂಬಂಧಿಸಿದಂತೆ 9, ದೊಂಬಿ ಪ್ರಕರಣಗಳಿಗೆ ಸಂಬಂಧಿಸಿದಂತೆ 3, ಮಟಕಾ, ಜೂಜಾಟಕ್ಕೆ ಸಂಬಧಿಸಿದಂತೆ 1 ಹಾಗೂ ಮುಂಜಾಗೃತ ಪ್ರಕರಣಗಳಿಗೆ ಸಂಬಧಿಸಿದಂತೆ 3 ಪ್ರಕರಣಗಳು ಧಾಖಲಾಗಿದ್ದು, ಪೊಲೀಸ ಇಲಾಖೆಯ ಅಪರಾಧಿಕ ವರದಿ ಯಲ್ಲಿ ನಮೂದಾಗಿವೆ.





