
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಂದು ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ನಡೆಸಿದರು. ಹಚ್ಚ ಹಸಿರಿನ ನಡುವೆ ನೆಲೆಸಿರುವ ಯುನೆಸ್ಕೋ ವಿಶ್ವ ಪರಂಪರೆಯ ತಾಣದಲ್ಲಿ ಒಂದು ಕೊಂಬಿನ ಘೇಂಡಾಮೃಗವನ್ನು ಒಳಗೊಂಡಂತೆ ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿಗಳಿಂದ ಕೂಡಿದೆ.

ಲೋಕಸಭಾ ಚುನಾವಣೆ ಹತ್ತಿರ ಹೊಸ್ತಿಲಲ್ಲಿರುವಾಗ ಪ್ರಧಾನಿ ಮೋದಿ, ರಾಜಕೀಯ ಜಂಜಾಟಗಳಿಂದ ಕೆಲ ಕಾಲ ದೂರವಿದ್ದು, ಪ್ರಕೃತಿಯ ಸೊಬಗು ಮೈತುಂಬಿಕೊಂಡರು. ತಮ್ಮ ಕ್ಯಾಮರಾ ಕೈಚಳಕದಲ್ಲಿ ಅದ್ಭುತ ಚಿತ್ರವನ್ನು ಸೆರೆ ಹಿಡಿದರು. ಕೆಲ ಹೊತ್ತು ಆನೆ ಮೇಲೆ ಕುಳಿತು ವಿಹರಿಸಿದರು.
Author: Karnataka Files
Post Views: 4





