ಒಂದೆಡೆ ಲಿಂಗಾಯತರನ್ನು ರಾಜಕೀಯವಾಗಿ ತುಳಿಯಲಾಗುತ್ತಿದೆ ಎಂದು ವೀರಶೈವ ಮಠಾಧೀಶರು ಸಾಮೂಹಿಕವಾಗಿ ಬಿಜೆಪಿ ಅಭ್ಯರ್ಥಿ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಿರುದ್ಧ ಬಹಿರಂಗ ಸಮರ ಸಾರಿರುವಾಗ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಧಾರವಾಡ ಜಿಲ್ಲೆಯ ಲಿಂಗಾಯತ ಯುವ ಮುಖಂಡರುಗಳಿಗೆ ರಾಜ್ಯ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ ನೇಮಕಾತಿ ಆದೇಶ ಹೊರಡಿಸಿದ್ದು, ರಾಜ್ಯ ಕಾಂಗ್ರೇಸ್ ಉಪಾಧ್ಯಕ್ಷರನ್ನಾಗಿ ಮೋಹನ ಲಿಂಬಿಕಾಯಿ, ಕೆ ಪಿ ಸಿ ಸಿ ಪ್ರಧಾನ ಕಾರ್ಯದರ್ಶಿಯಾಗಿ ಮೋಹನ ಅಸುಂಡಿ, ಇಸ್ಮಾಯಿಲ್ ತಮಟಗಾರ, ನಾಗರಾಜ ಗೌರಿ, ರಜತ್ ಉಳ್ಳಾಗಡ್ಡಿಮಠ, ಸ್ವಾತಿ ಮಳಗಿ, ಅಲ್ತಾಫ್ ನವಾಜ್ ಕಿತ್ತೂರ, ಮಲ್ಲಿಕಾರ್ಜುನ ಅಕ್ಕಿ, ಪಾರಸಮಲ ಜೈನ, ಸತೀಶ ಮೆಹರವಾಡೆ, ಸದಾನಂದ ಡಂಗನವರ, ವಿಜಯ ಮತ್ತಿಕಟ್ಟಿ, ಕಿರಣ ಮೂಗಬಸವ, ಷಣ್ಮುಖ ಶಿವಳ್ಳಿಯವರನ್ನು ನೇಮಕ ಮಾಡಿ ಕೆ ಸಿ ವೇಣುಗೋಪಾಲ ಆದೇಶ ಹೊರಡಿಸಿದ್ದಾರೆ.





