ದಕ್ಷಿಣ ಕನ್ನಡದ ಕಟ್ಟಾ ಆರ್‌ಎಸ್‌ಎಸ್ ಮುಖಂಡ, ಬಿಲ್ಲವ ಸಮುದಾಯದ ನಾಯಕ ಸತ್ಯಜಿತ್ ಸುರತ್ಕಲ್, ದಕ್ಷಿಣಕನ್ನಡ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ತಮ್ಮ ಬೆಂಬಲ ಘೋಷಿಸಿದ್ದಾರೆ.
ಬಿಲ್ಲವ ಸಮುದಾಯ, ದಕ್ಷಿಣ ಕನ್ನಡದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್, ಶಿವಮೊಗ್ಗ ಕಾಂಗ್ರೇಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ ಅವರ ಪರವಾಗಿ ಕೆಲಸ ಮಾಡುತ್ತದೆ ಎಂದು ಸತ್ಯಜಿತ ಹೇಳಿದ್ದಾರೆ.
ಉಡುಪಿಯಲ್ಲಿ ನಮ್ಮ ಸಮುದಾಯದವರು ಬಿಜೆಪಿಯ ಕೋಟ ಪೂಜಾರಿಗೆ ಮತ ಹಾಕುತ್ತಾರೆ ಎಂದು ಬಿಲ್ಲವ ಮುಖಂಡ ಸತ್ಯಜಿತ ತಿಳಿಸಿದ್ದಾರೆ.
ಬಿಜೆಪಿಗರ ಮಾತು ಕೇಳಿ ಜನಾರ್ಧನ ಪೂಜಾರಿಯವರನ್ನು ಪದೇ ಪದೇ ಸೋಲಿಸಲು ಕಾರಣವಾದೆ. ಅದಕ್ಕೆ ಈಗ ಪಶ್ಚಾತಾಪ ಪಡುತ್ತಿದ್ದೇನೆ ಎಂದು ಆರ್ ಎಸ್ ಎಸ್ ಮುಖಂಡ ಸತ್ಯಜಿತ ಸುರತ್ಕಲ್ ಹೇಳಿದ್ದಾರೆ. ಈಗ ನನಗೆ ತಪ್ಪಿನ ಅರಿವಾಗಿದ್ದು, ದಕ್ಷಿಣ ಕನ್ನಡ ಹಾಗೂ ಶಿವಮೊಗ್ಗದಲ್ಲಿ ಕಾಂಗ್ರೇಸ್ ಅಭ್ಯರ್ಥಿ ಪರ ಪ್ರಚಾರ ಮಾಡುವದಾಗಿ ತಿಳಿಸಿದ್ದಾರೆ
Author: Karnataka Files
Post Views: 2





