ಉತ್ತರ ಪ್ರದೇಶದ ಬೋರ್ಡ್ ಆಫ್ ಮದರ್ಸಾ ಎಜುಕೇಶನ್ ಆಕ್ಟ್ ಅನ್ನು ಹಿಂತೆಗೆದುಕೊಳ್ಳುವ ಅಲಹಾಬಾದ್ ಹೈಕೋರ್ಟ್ ತೀರ್ಪಿಗೆ ಸುಪ್ರೀಂ ಕೋರ್ಟ್ ಇಂದು ತಡೆಯಾಜ್ಞೆ ನೀಡಿದೆ.
‘ಉತ್ತರ ಪ್ರದೇಶ ಬೋರ್ಡ್ ಆಫ್ ಮದರ್ಸಾ ಎಜುಕೇಶನ್ ಆಕ್ಟ್ 2004’ ಅಸಂವಿಧಾನಿಕ ಎಂದು ಅಲಹಾಬಾದ್ ಹೈಕೋರ್ಟ್ ಮಾರ್ಚ್ 22 ರಂದು ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ತಡೆಹಿಡಿದಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು, ಕಾಯ್ದೆಯ ನಿಬಂಧನೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಅಲಹಾಬಾದ ಹೈಕೋರ್ಟ್ ತಪ್ಪಾಗಿ ತಿಳಿದಿದೆ ಎಂದು ಗಮನಿಸಿದೆ.
ಅಲಹಾಬಾದ ಹೈಕೋರ್ಟ್‌ನ ನಿರ್ದೇಶನಗಳು ಸುಮಾರು 17 ಲಕ್ಷ ವಿದ್ಯಾರ್ಥಿಗಳ ಭವಿಷ್ಯದ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತವೆ ಎಂದು ಹೈಕೋರ್ಟ್ ತೀರ್ಪಿಗೆ ತಡೆಯಾಜ್ಞೆ ನೀಡಿದೆ.
Author: Karnataka Files
Post Views: 2





