Download Our App

Follow us

Home » ರಾಜಕೀಯ » ಬದಲಾವಣೆ ಮಾಡಿ, ಇಲ್ಲದಿದ್ದರೆ ಉಳಿಗಾಲವಿಲ್ಲ. ಹೀಗೆ ವಿ ಕೆ ಅಂದಿದ್ದು ಯಾರಿಗೆ.

ಬದಲಾವಣೆ ಮಾಡಿ, ಇಲ್ಲದಿದ್ದರೆ ಉಳಿಗಾಲವಿಲ್ಲ. ಹೀಗೆ ವಿ ಕೆ ಅಂದಿದ್ದು ಯಾರಿಗೆ.

ಫಕೀರ ದಿಂಗಾಲೇಶ್ವರ ಸ್ವಾಮೀಜಿ ಪ್ರವೇಶದಿಂದಾಗಿ ಧಾರವಾಡ ಲೋಕಸಭಾ ಕ್ಷೇತ್ರ ರಾಜ್ಯದ ಗಮನ ಸೆಳೆದಿದೆ. ಶ್ರೀಗಳು ಹುಬ್ಬಳ್ಳಿಗೆ ಕಾಲಿಡುವ ಮುನ್ನವೇ ಕಾಂಗ್ರೇಸ್ ಅಂಗಳದಲ್ಲಿ ಬೆಳವಣಿಗೆಗಳು ನಡೆದಿವೆ. 

ದಿಂಗಾಲೇಶ್ವರ ಶ್ರೀಗಳ ಸ್ಪರ್ಧೆ ವಿಚಾರ ಕಾಂಗ್ರೇಸ್ ಹೈಕಮಾಂಡ ಮಟ್ಟಕ್ಕೆ ಹೋಗಿದೆ. ಶ್ರೀಗಳಿಗೆ ಟಿಕೇಟ್ ಕೊಡಬೇಕೋ ಅಥವಾ ಬೆಂಬಲ ಕೊಡಬೇಕೋ ಅನ್ನೋದರ ಬಗ್ಗೆ ಎರಡು ದಿನಗಳಲ್ಲಿ ನಿರ್ಧಾರ ಮಾಡುವದಾಗಿ ರಾಜ್ಯ ಕಾಂಗ್ರೇಸ್ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಹೇಳಿದ್ದು, ಚರ್ಚೆಗೆ ಎಡೆಮಾಡಿದೆ. 

ಜೋಶಿ ಬದಲಾವಣೆ ಮಾಡಿ, ಇಲ್ಲದಿದ್ದರೆ ಲಿಂಗಾಯತರಿಗೆ ಉಳಿಗಾಲವಿಲ್ಲ 

ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ, ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿ ಕಾರ್ಯಾಧ್ಯಕ್ಷ, ಶಾಸಕ ವಿನಯ ಕುಲಕರ್ಣಿ ಇಂದು ಭಾವುಕ ಮಾತುಗಳನ್ನಾಡಿದ್ದಾರೆ. ಪ್ರಲ್ಲಾದ ಜೋಶಿಯವರ ದಬ್ಬಾಳಿಕೆ, ಸೇಡಿನ ರಾಜಕಾರಣದ ಬಗ್ಗೆ ಮಾತನಾಡಿರುವ ವಿನಯ ಕುಲಕರ್ಣಿ, ಈ ಸಲ ಜೋಶಿ ಬದಲಾವಣೆ ಮಾಡಿರಿ, ಇಲ್ಲದಿದ್ದರೆ ಧಾರವಾಡ ಜಿಲ್ಲೆಯ ಲಿಂಗಾಯತರಿಗೆ ಉಳಿಗಾಲವಿಲ್ಲ ಎಂದು ಭಾವುಕರಾಗಿ ಹೇಳಿದ್ದಾರೆ. ಧಾರವಾಡ ಜಿಲ್ಲೆಯ ಬಹುತೇಕ ಎಲ್ಲ ಲಿಂಗಾಯತ ಮುಖಂಡರನ್ನು ಜೋಶಿ ಮುಗಿಸಿದ್ದಾರೆ ಎಂದು ಆರೋಪಿಸಿದ್ದಾರೆ. 

Karnataka Files
Author: Karnataka Files

Leave a Comment

RELATED LATEST NEWS

Top Headlines

ನ್ಯೂ ಕಮಿಷನರ್ ಸೈಲೆಂಟ್ ಸ್ಟ್ರೋಕ್ : ಅವಳಿ ನಗರದಲ್ಲಿ ಅಸಲಿ ಖಾಕಿ ಖದರ್ ಶುರು….

ಹುಬ್ಬಳ್ಳಿ-ಧಾರವಾಡ ನಗರ ವ್ಯಾಪ್ತಿಯಲ್ಲಿ ಚಾಕು ಇರಿತ ಪ್ರಕರಣಗಳನ್ನು ಹತ್ತಿಕ್ಕಲು ಹೊಸದಾಗಿ ಬಂದಿರುವ ಪೊಲೀಸ್ ಕಮಿಷನರ್ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಅವಳಿ ನಗರದಲ್ಲಿ ಚಾಕು, ತಲ್ವಾರ್ ಸೇರಿದಂತೆ ಮಾರಕಾಸ್ತ್ರಗಳನ್ನು

Live Cricket

error: Content is protected !!