Download Our App

Follow us

Home » ಭಾರತ » ನೇಹಾ ಕೊಲೆ ಆರೋಪಿ ಫಯಾಜ್ ಎನ್ಕೌಂಟರ್ ಗೆ ಹೆಚ್ಚಿದ ಒತ್ತಡ

ನೇಹಾ ಕೊಲೆ ಆರೋಪಿ ಫಯಾಜ್ ಎನ್ಕೌಂಟರ್ ಗೆ ಹೆಚ್ಚಿದ ಒತ್ತಡ

ಹುಬ್ಬಳ್ಳಿಯಲ್ಲಿ ನಿನ್ನೇ ನಡೆದ ನೇಹಾ ನಿರಂಜನ ಹಿರೇಮಠ ಎಂಬ ಯುವತಿಯ ಬರ್ಬರ ಕೊಲೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಮುಗ್ದ ಯುವತಿಯ ಕೊಲೆಗಾರ ಮುನವಳ್ಳಿಯ ಫಯಾಜನನ್ನು ಎನ್ಕೌಂಟರ ಮಾಡುವಂತೆ ಧಾರವಾಡ ಜಿಲ್ಲೆಯ ವಿವಿಧ ಸಂಘಟನೆಗಳು ಆಗ್ರಹಿಸಿವೆ.

ನೇಹಾ ಕೊಲೆಗಾರ ಫಯಾಜನಿಗೆ ಅತ್ಯಂತ ಕಠಿಣ ಶಿಕ್ಷೆ ಕೊಡಲೇಬೇಕು ಎಂದಿರುವ ಧಾರವಾಡ ಅಂಜುಮನ್ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಹಾಗೂ ಅಳ್ನಾವರ ಅಂಜುಮನ್ ಅಧ್ಯಕ್ಷ ಫಹಿಂ ಕಾಂಟ್ರಾಕ್ಟರ, ಆತನ ಪರವಾಗಿ ಯಾರು ವಕಾಲತ್ತು ವಹಿಸಬಾರದು ಎಂದು ವಕೀಲರಲ್ಲಿ ಪ್ರಾರ್ಥಿಸಿದ್ದಾರೆ. 

ನೇಹಾ ಕೊಲೆಗಾರ, ಫಯಾಜನಿಗೆ ಎನ್ಕೌಂಟರ್ ಮಾಡಿದರೆ, ತಕ್ಕ ಶಾಸ್ತಿ ಮಾಡದಂತಾಗುತ್ತದೆ ಎಂದಿದ್ದಾರೆ. ರೌಡಿಸಂ ಮಟ್ಟ ಹಾಕಿ ಎಂದಿರುವ ಇಸ್ಮಾಯಿಲ್ ತಮಟಗಾರ, ನಾವು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದೇವೆ ವಿಧ್ಯಾರ್ಥಿಗಳ ಸುರಕ್ಷತೆ ಬಗ್ಗೆ ಕಾಳಜಿ ವಹಿಸುವದು ಸೂಕ್ತ ಎಂದರು. ನೇಹಾ ಅತ್ಯಂತ ಮುಗ್ದ ಹುಡುಗಿ, ಆಕೆಯ ಕೊಲೆ ವೈಯುಕ್ತಿಕವಾಗಿ ನೋವು ಕೊಟ್ಟಿದೆ ಎಂದಿರುವ ಇಸ್ಮಾಯಿಲ್ ಹಾಗೂ ಫಹಿಂ, ಇಂದು ಪೊಲೀಸ ಆಯುಕ್ತರನ್ನು ಭೇಟಿ ಮಾಡಲಿದ್ದಾರೆ.

ಫಯಾಜ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹ ಮಾಡಲಿರುವ ಮುಸ್ಲಿಮ್ ಮುಖಂಡರು, ಫಯಾಜನಂತಹ ಕ್ರೂರಿಗಳನ್ನು ಎನ್ಕೌಂಟರ್ ಮಾಡುವಂತೆ ಆಗ್ರಹಿಸಿದ್ದಾರೆ 

Karnataka Files
Author: Karnataka Files

Leave a Comment

RELATED LATEST NEWS

Top Headlines

ನವಲಗುಂದ ವಿಧಾನಸಭಾ ಕ್ಷೇತ್ರದ ಮೂರು ತಾಲೂಕು ಬರಪೀಡಿತ ಘೋಷಣೆ: ಧಾರವಾಡ ತಾಲೂಕು ನಿರ್ಲಕ್ಷ್ಯ ಆರೋಪ

ನವಲಗುಂದ: ಮಳೆ ಅಭಾವದ ಹಿನ್ನೆಲೆಯಲ್ಲಿ ಸರ್ಕಾರ ಎರಡನೇ ಹಂತದಲ್ಲಿ ರಾಜ್ಯದ 24 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿದ್ದು, ಧಾರವಾಡ ಜಿಲ್ಲೆಯ ನವಲಗುಂದ, ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ತಾಲೂಕುಗಳು

Live Cricket

error: Content is protected !!