Download Our App

Follow us

Home » ಭಾರತ » ಅಂಜಲಿ ಕೊಲೆಗೆ ಟ್ವಿಸ್ಟ್. ಅವನನ್ನು ಬಂಧಿಸಬೇಕು. ಆತ ನಿರಂಜನ ಹಿರೇಮಠ ಪಿ ಎ ಅಂತೆ

ಅಂಜಲಿ ಕೊಲೆಗೆ ಟ್ವಿಸ್ಟ್. ಅವನನ್ನು ಬಂಧಿಸಬೇಕು. ಆತ ನಿರಂಜನ ಹಿರೇಮಠ ಪಿ ಎ ಅಂತೆ

ಅಂಜಲಿ ಅಂಬಿಗೇರ ಕೊಲೆ ನಡೆದ ಬಳಿಕ ಪ್ರಕರಣದ ತನಿಖೆ ನಡೆಸುತ್ತಿರುವ ಸಿ ಐ ಡಿ ಎದುರು ಸ್ಪೋಟಕ ಮಾಹಿತಿ ಹೊರ ಬೀಳುತ್ತಿದೆ. ತಮ್ಮ ಪುತ್ರಿಯ ಕೊಲೆಯಿಂದ ಶಾಕ್ ಗೆ ಒಳಗಾಗಿದ್ದ ನೇಹಾ ಹಿರೇಮಠ ತಂದೆ ನಿರಂಜನ್ ಹಿರೇಮಠ, ತಮ್ಮ ಅಪ್ತ ಸಹಾಯಕ ವಿಜಯ ಅಲಿಯಾಸ್ ಈರಣ್ಣ ಮಾಡಿದ ಘನಂದಾರಿ ಕೆಲಸ ಇದೀಗ ಬಯಲಾಗಿದೆ. 

ಅಂಜಲಿ ಕೊಲೆಯಾಗುವ ಮುನ್ನ ಮನೆಗೆ ಬಂದಿದ್ದ ಪಾಲಿಕೆ ಸದಸ್ಯ ನಿರಂಜನ್ ಹಿರೇಮಠ ಪಿ ಎ ವಿಜಯ ಎಂಬಾತ ಅಂಜಲಿಗೆ ಧಮ್ಕಿ ಹಾಕಿ ಹೋಗಿದ್ದನಂತೆ. ಈ ವಿಷಯವನ್ನು ಸ್ವತಃ ಅಂಜಲಿ ಸಹೋದರಿ ಹೊರ ಹಾಕಿದ್ದಾಳೆ. 

ಅಂಜಲಿಗೆ ವಿಜಯ ಪ್ರೀತಿ ಮಾಡ್ತಿದ್ದ, ಅಂಜಲಿಗೆ ವಯಸ್ಸು 18 ತುಂಬದ ಕಾರಣ ಅವರಿಬ್ಬರನ್ನು ಬೇರೆ ಮಾಡಲಾಗಿತ್ತು. ಈ ವಿಷಯವನ್ನಿಟ್ಟುಕೊಂಡು ವಿಜಯ್ ಅಲಿಯಾಸ್ ಈರಣ್ಣ ಕೊಲೆಯಾಗುವ ಸ್ವಲ್ಪ ದಿನಗಳ ಮುನ್ನ ಜಗಳ ಮಾಡಿದ್ದನಂತೆ ಎಂದು ಅಂಜಲಿ ಸಹೋದರಿ ತಿಳಿಸಿದ್ದಾಳೆ. 

ಅಂಜಲಿ ಹತ್ಯೆಯಾದ ಬಳಿಕ ಭಾರಿ ಪ್ರತಿಭಟನೆ ನಡೆಸಿದ್ದ ನಿರಂಜನ್ ಹಿರೇಮಠ ಪೂಲೀಸ್ ವೈಫಲ್ಯ ಹಾಗೂ ಸರ್ಕಾರದ ಮೇಲೆ ಕಿಡಿಕಾರಿದ್ದರು.    ಆದರೆ ತಮ್ಮ ಅಪ್ತ ಸಹಾಯಕನ ಮೇಲೆ ಇದೇ ಅಂಜಲಿ ವಿಷಯವಾಗಿ ಪೋಕ್ಸೋ ಕೇಸ್ ಧಾಖಲಾದ ಬಗ್ಗೆ  ನಿರಂಜನ ಹಿರೇಮಠ  ಎಲ್ಲಿಯೂ  ಹೇಳಿರಲಿಲ್ಲ. ಆ ಬಗ್ಗೆ ಗೊತ್ತಿದ್ದು, ನಿರಂಜನ ಹಿರೇಮಠ ಮುಚ್ಚಿಟ್ಟುಕೊಂಡಿದ್ರಾ ಅನ್ನೋ ಮಾತು ಕೇಳಿ ಬರುತ್ತಿದೆ. 

ಅಲ್ಲದೇ ಪೋಕ್ಸೋ ಕೇಸ್ ನಲ್ಲಿ ಜೈಲುಪಾಲಾಗಿದ್ದ ವಿಜಯ್ ಎಂಬಾತನನ್ನು ಇದೇ ನಿರಂಜನ ಹಿರೇಮಠ ಜೈಲಿನಿಂದ ಹೊರತರುವಲ್ಲಿ ಸಹಾಯ ಮಾಡಿದ್ದರು ಅನ್ನೋ ಮಾತುಗಳು ಕೇಳಿ ಬರುತ್ತಿವೆ. ನನ್ನ ಮಗಳು ನೇಹಾ ಬೇರೆಯಲ್ಲ ಅಂಜಲಿ ಬೇರೆ ಅಲ್ಲ ಎಂದು ಹೇಳಿರುವ ನಿರಂಜನ ಹಿರೇಮಠ, ಅಂಜಲಿ ಸಹೋದರಿ ಹೊರಹಾಕಿರುವ ಸ್ಫೋಟಕ ಮಾಹಿತಿ ಕುರಿತು ಕುಲಂಕುಷ ತನಿಖೆಗೆ ಆಗ್ರಹಿಸಬೇಕಾಗಿದೆ. ತಮ್ಮ ಅಪ್ತ ಸಹಾಯಕನಾಗಿರುವ ವಿಜಯ್ ಅಲಿಯಾಸ್ ಈರಣ್ಣನನ್ನು ತನಿಖೆಗೆ ಒಳಪಡಿಸುವಂತೆ ಆಗ್ರಹಿಸಬೇಕಾಗಿದೆ. 

Karnataka Files
Author: Karnataka Files

Leave a Comment

RELATED LATEST NEWS

Top Headlines

ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಸಂವಿಧಾನ ಪೀಠಿಕೆ. ಡಿಸೆಂಬರ್ 8 ಕ್ಕೆ ಬಸವಾಭಿಮಾನಿಯ ಮದುವೆ. ವಚನ ಮಾಂಗಲ್ಯ

ಡಿಸೆಂಬರ್ 8 ರಂದು ಖಾನಾಪುರ ತಾಲೂಕಿನ ಅಂಬಡಗಟ್ಟಿಯಲ್ಲಿ ಬಸವಾಭಿಮಾನಿಯೊಬ್ಬರ ಅಪರೂಪದ ಮದುವೆ ನಡೆಯಲಿದೆ. ರಾಣಿಚೆನ್ನಮ್ಮ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಮಹಾಂತೇಶ್ ಕುಂಬಾರ ಅವರ ಮದುವೆ ಆರತಿ ಎಂಬುವವರ

Live Cricket

error: Content is protected !!