Download Our App

Follow us

Home » ಕಾನೂನು » ವಾಹನಗಳಿಗೆ ಎಲ್‌ಇಡಿ ಬಲ್ಫ್ ಅಳವಡಿಕೆ. ಒಂದೇ ದಿನದಲ್ಲಿ 1518 ಪ್ರಕರಣ ಧಾಖಲು

ವಾಹನಗಳಿಗೆ ಎಲ್‌ಇಡಿ ಬಲ್ಫ್ ಅಳವಡಿಕೆ. ಒಂದೇ ದಿನದಲ್ಲಿ 1518 ಪ್ರಕರಣ ಧಾಖಲು

ವಾಹನಗಳಿಗೆ ಹೆಚ್ಚು ಬೆಳಕು ಹೊರಹಾಕುವ ಎಲ್ ಇ ಡಿ ಬಲ್ಬ್ ಅಳವಡಿಕೆ ಮಾಡಿರುವ ಹಿನ್ನೆಲೆಯಲ್ಲಿ ನಿನ್ನೇ ಒಂದೇ ದಿನಕ್ಕೆ 1518 ಕೇಸುಗಳು ಧಾಖಲು ಮಾಡಲಾಗಿದೆ. 

ನಿನ್ನೆಯಿಂದ ಪೊಲೀಸರು ಕೇಂದ್ರ ಮೋಟಾರ ವಾಹನಗಳ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿದ್ದಾರೆ. ನಿನ್ನೇಯಿಂದ ಕಾರ್ಯಾಚರಣೆ ಆರಂಭ ಮಾಡಲಾಗಿದ್ದು, ವಾಹನಗಳ ತಪಾಸನಾ ಕಾರ್ಯ ಮುಂದುವರೆದಿದೆ. 

ಇತ್ತೀಚಿನ ದಿನಗಳಲ್ಲಿ ಹಲವಾರು ವಾಹನಗಳಲ್ಲಿ ಹೆಚ್ಚು ಬೆಳಕು ಹೊರಹಾಕುವ ಎಲ್‌ಇಡಿ ಬಲ್ಸ್‌ಗಳನ್ನು ಅಳವಡಿಸಿರುವುದು ಕಂಡುಬಂದಿದೆ. ಇದರಿಂದ ಎದುರು ಮುಖದಲ್ಲಿ ಸಂಚರಿಸುವ ಇತರ ವಾಹನ ಸವಾರ, ಚಾಲಕರಿಗೆ ತೊಂದರೆ ಉಂಟಾಗುತ್ತಿದೆ. ಅಲ್ಲದೆ, ರಸ್ತೆ ಅಪಘಾತಗಳು ಸಂಭವಿಸುತ್ತಿವೆ.

ಭಾರಿ ವಾಹನಗಳಾದ ಲಾರಿ, ಟ್ರಕ್, ಬಸ್ ಮುಂತಾದವುಗಳು ಹೆಚ್ಚು ಪ್ರಖರ ಬೆಳಕು ಹೊರಹಾಕುವ ಮತ್ತು ಕಣ್ಣು ಕುಕ್ಕುವ ಎಲ್‌ಇಡಿ ದೀಪಗಳನ್ನು ಅಳವಡಿಸಿದ್ದಾರೆ. ಇದರಿಂದ ಇತರೆ ಚಾಲಕರಿಗೆ ವಾಹನ ಚಲಾಯಿಸಲು ತೊಂದರೆ ಉಂಟಾಗುತ್ತಿದೆ. ಆದರಿಂದ ವಾಹನ ಮಾಲೀಕರು ಕಡ್ಡಾಯವಾಗಿ ಕೇಂದ್ರ ಮೋಟಾರು ವಾಹನ ಕಾಯ್ದೆಯಂತೆ ಮಾರ್ಗಸೂಚಿ ಪಾಲನೆ ಮಾಡಬೇಕು ಎಂದು ಹಿರಿಯ ಪೊಲೀಸ ಅಧಿಕಾರಿ ಅಲೋಕಕುಮಾರ ಹೇಳಿದ್ದಾರೆ. 

ಇಲ್ಲವಾದರೆ ಸವಾರ, ಚಾಲಕರ ವಿರುದ್ಧ ಐಎಂವಿ ಕಾಯ್ದೆಯ ಕಲಂ 177ರಡಿ ಪ್ರಕರಣ ದಾಖಲಿಸಿ ಕ್ರಮ ತೆಗೆದುಕೊಳ್ಳುವುದಾಗಿ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ (ಸಂಚಾರ ಮತ್ತು ರಸ್ತೆ ಸುರಕ್ಷತೆ) ಅಲೋಕ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಸಂವಿಧಾನ ಪೀಠಿಕೆ. ಡಿಸೆಂಬರ್ 8 ಕ್ಕೆ ಬಸವಾಭಿಮಾನಿಯ ಮದುವೆ. ವಚನ ಮಾಂಗಲ್ಯ

ಡಿಸೆಂಬರ್ 8 ರಂದು ಖಾನಾಪುರ ತಾಲೂಕಿನ ಅಂಬಡಗಟ್ಟಿಯಲ್ಲಿ ಬಸವಾಭಿಮಾನಿಯೊಬ್ಬರ ಅಪರೂಪದ ಮದುವೆ ನಡೆಯಲಿದೆ. ರಾಣಿಚೆನ್ನಮ್ಮ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಮಹಾಂತೇಶ್ ಕುಂಬಾರ ಅವರ ಮದುವೆ ಆರತಿ ಎಂಬುವವರ

Live Cricket

error: Content is protected !!