Download Our App

Follow us

Home » ಅಪರಾಧ » ಮುದ್ದೇಬಿಹಾಳದಲ್ಲಿ ಮುಸ್ಲಿಮ್ ಖಬರಸ್ಥಾನದಲ್ಲಿದ್ದ ಗೋರಿಗಳು ನೆಲಸಮ

ಮುದ್ದೇಬಿಹಾಳದಲ್ಲಿ ಮುಸ್ಲಿಮ್ ಖಬರಸ್ಥಾನದಲ್ಲಿದ್ದ ಗೋರಿಗಳು ನೆಲಸಮ

ಮುದ್ದೇಬಿಹಾಳದ ತಾಳಿಕೋಟೆ ರಸ್ತೆಯಲ್ಲಿರುವ ಮುಸ್ಲಿಮ್ ಸಮಾಜದ ಖಬರಸ್ಥಾನದಲ್ಲಿದ್ದ ನೂರಕ್ಕೂ ಹೆಚ್ಚು ಗೋರಿಗಳನ್ನು ನೆಲಸಮ ಮಾಡಲಾಗಿದೆ. 

ಗೋರಿ ನೆಲಸಮ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಜನರ ಮೇಲೆ ದೂರು ಧಾಖಲಾಗಿದೆ. ಕಾಶಿನಾಥ, ಮಲ್ಲಿಕಾರ್ಜುನ್, ವಿಜಯ ಬಾರಿಕಾಯಿ, ನೀಲಮ್ಮ ಬಾರಿಕಾಯಿ, ಸಂಗಮೇಶ ಹಿರೇಕುರುಬರ ಎಂಬುವವರ ಮೇಲೆ ಪ್ರಕರಣ ಧಾಖಲು ಮಾಡಲಾಗಿದೆ. 

ಖಬರಸ್ಥಾನ ಇರುವ ಜಮೀನಿನ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ವ್ಯಾಜ್ಯ ಇತ್ತೆಂದು ಹೇಳಲಾಗಿದೆ. ಏಕಾಏಕಿ 6 ಜನ ಬಂದು ಗೋರಿಗಳನ್ನು ನಾಶ ಮಾಡಿದ್ದಾರೆ ಎಂದು ಮುದ್ದೇಬಿಹಾಳದ ಮುಸ್ಲಿಮ್ ಸಮಾಜದ ನಾಯಕ ಮೆಹಬೂಬ ಗೋಳಸಂಗಿ ದೂರು ನೀಡಿದ್ದಾರೆ. ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ನವಲಗುಂದ ನರಗುಂದ ರೈತ ಬಂಡಾಯಕ್ಕೆ 46 ವರ್ಷ ಪೂರ್ಣ : ರೈತರ ಪಾದಕ್ಕೆ ಶರಣಾಗಿದ್ದ ಕಾಂಗ್ರೇಸ್ ಸರ್ಕಾರ : ಅಂದು ನಡೆದಿದ್ದು ಏನು? ಇಲ್ಲಿದೆ ಡಿಟೇಲ್ ಸ್ಟೋರಿ

ನವಲಗುಂದ ನರಗುಂದ ರೈತ ಬಂಡಾಯ ನಡೆದು ಇವತ್ತಿಗೆ 46 ವರ್ಷಗಳು ಪೂರ್ಣಗೊಂಡಿವೆ. ಪ್ರತಿ ವರ್ಷ ಜುಲೈ 21 ರಂದು ರೈತರು, ಈ ದಿನವನ್ನು ರೈತ ಹುತಾತ್ಮ ದಿನಾಚರಣೆ

Live Cricket

error: Content is protected !!