ಧಾರವಾಡದಲ್ಲಿ ಸಣ್ಣಗೆ ಮಳೆ ಸುರಿಯುತ್ತಿದ್ದರೆ, ಅತ್ತ ಹೊರವಲಯದಲ್ಲಿ ನೆತ್ತರು ಹರಿದಿದೆ. ಕ್ಷುಲ್ಲಕ ಕಾರಣಕ್ಕೆ ಹರೀಶ್ ಹೆಣವಾಗಿ ಬಿದ್ದಿದ್ದಾನೆ.
ಧಾರವಾಡದ ಡೋರ ಗಲ್ಲಿಯ ಹರೀಶ್ ಶಿಂಧೆ ಟೈಲ್ಸ್ ಮೇಸ್ತ್ರಿಯಾಗಿದ್ದ. ತಾಯಿ ಸೂಪರ ಮಾರ್ಕೆಟನಲ್ಲಿ ಕಾಯಿಪಲ್ಲೇ ಮಾರಾಟ ಮಾಡಿ ಬದುಕು ಕಟ್ಟಿಕೊಂಡಿದ್ದಳು. ಇದ್ದ ಒಬ್ಬ ಮಗನನ್ನು ಸಾಕಿ ಸಲುಹಿ ದೊಡ್ಡವನಾಗಿ ಮಾಡಿದ್ದಳು.
ಕೊಲೆಯಾಗಿರುವ ಹರೀಶ್, ನಿನ್ನೇ ರಾತ್ರಿ ವಾಸುದೇವ ಲೇಔಟ್ ಗೆ ದೋಸ್ತರ ಜೊತೆ ಹೋಗಿದ್ದನಂತೆ. ಅಲ್ಲಿ ಕ್ಷುಲ್ಲಕ ಕಾರಣಕ್ಕೆ ಗೆಳೆಯರ ಮಧ್ಯೆ ಜಗಳ ನಡೆದು ಕೊಲೆಯಲ್ಲಿ ಅಂತ್ಯವಾಗಿದೆ ಎನ್ನಲಾಗಿದೆ.
ಸ್ಥಳಕ್ಕೆ ಭೇಟಿ ನೀಡಿರುವ ಧಾರವಾಡ ಗ್ರಾಮೀಣ ಪೊಲೀಸರು ತನಿಖೆ ನಡೆಸಿದ್ದಾರೆ. ಹಂತಕರು ಧಾರವಾಡದವರು ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ.
Author: Karnataka Files
Post Views: 2





