Download Our App

Follow us

Home » ಕಾನೂನು » ಪಂಚಮಸಾಲಿ ಲಾಠಿ ಚಾರ್ಜ್ ಪ್ರಕರಣ. ನ್ಯಾಯಾಂಗ ತನಿಖೆಗೆ ಒಪ್ಪಿಸಿದ ಹೈಕೋರ್ಟ

ಪಂಚಮಸಾಲಿ ಲಾಠಿ ಚಾರ್ಜ್ ಪ್ರಕರಣ. ನ್ಯಾಯಾಂಗ ತನಿಖೆಗೆ ಒಪ್ಪಿಸಿದ ಹೈಕೋರ್ಟ

೨ಎ ಮೀಸಲಾತಿಗಾಗಿ ಪ್ರತಿಭಟನೆ ನಡೆಸಿದ್ದ ಪಂಚಮಸಾಲಿ ಹೋರಾಟಗಾರರ ಮೇಲೆ ನಡೆದ ಲಾಠಿ ಚಾರ್ಜ್ ಪ್ರಕರಣವನ್ನು ಹೈಕೋರ್ಟ ನ್ಯಾಯಾಂಗ ತನಿಖೆಗೆ ಒಪ್ಪಿಸಿದೆ. 

10.12.2024ರಂದು ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲಿ ಸುವರ್ಣ ಸೌಧದ ಮುಂದೆ ಪಂಚಮಸಾಲಿಗಳ ಮೇಲೆ ಲಾಠಿ ಚಾರ್ಜ್‌ ನಡೆದಿತ್ತು.

ಈ ಘಟನೆಯನ್ನು ವಿಚಾರಣಾ ಆಯೋಗಕ್ಕೆ ವಹಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಬಾಗಲಕೋಟೆಯ ಕೂಡಲಸಂಗಮದ ಪಂಚಮಸಾಲಿ ಪೀಠಾಧ್ಯಕ್ಷ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅರ್ಜಿ ಸಲ್ಲಿಸಿದ್ದರು.

ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಈ ಆದೇಶ ಹೊರಡಿಸಿದೆ.

ರಾಜ್ಯ ಸರ್ಕಾರ, ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖಾ ಆಯೋಗ ರಚಿಸಬೇಕು ಎಂದು ಹೇಳಿದ್ದು, ಆಯೋಗವು ಕಾಲಮಿತಿಯಲ್ಲಿ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸಬೇಕು ಎಂದು ಪೀಠವು ಆದೇಶಿಸಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ನವಲಗುಂದ ನರಗುಂದ ರೈತ ಬಂಡಾಯಕ್ಕೆ 46 ವರ್ಷ ಪೂರ್ಣ : ರೈತರ ಪಾದಕ್ಕೆ ಶರಣಾಗಿದ್ದ ಕಾಂಗ್ರೇಸ್ ಸರ್ಕಾರ : ಅಂದು ನಡೆದಿದ್ದು ಏನು? ಇಲ್ಲಿದೆ ಡಿಟೇಲ್ ಸ್ಟೋರಿ

ನವಲಗುಂದ ನರಗುಂದ ರೈತ ಬಂಡಾಯ ನಡೆದು ಇವತ್ತಿಗೆ 46 ವರ್ಷಗಳು ಪೂರ್ಣಗೊಂಡಿವೆ. ಪ್ರತಿ ವರ್ಷ ಜುಲೈ 21 ರಂದು ರೈತರು, ಈ ದಿನವನ್ನು ರೈತ ಹುತಾತ್ಮ ದಿನಾಚರಣೆ

Live Cricket

error: Content is protected !!