ನೆಮ್ಮದಿಯಿಂದ ಇರುವ ಹುಬ್ಬಳ್ಳಿಯನ್ನು ಕೋಮು ಸಾಮರಸ್ಯ ಕದಡಲು ಗಣೇಶನನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆಂದು ಬಸವ ಶ್ರೀ ಪ್ರಶಸ್ತಿ ಪುರಸ್ಕ್ರತ ರಾಜಶೇಖರ ಮೆಣಸಿನಕಾಯಿ ಆರೋಪಿಸಿದ್ದಾರೆ.
ಬಿಜೆಪಿಯವರು ಮೊದಲು ತಮ್ಮ ಕಚೇರಿ ಮತ್ತು ಮನೆಗಳಲ್ಲಿ ಗಣೇಶನನ್ನು ಪ್ರತಿಷ್ಟಾಪನೆ ಮಾಡಲಿ ಎಂದು ಆಗ್ರಹಿಸಿರುವ ಮೆಣಸಿನಕಾಯಿ, ನಕಲಿ ಹಿಂದುತ್ವವಾದಿಗಳು ರಾಜಕೀಯಕೋಸ್ಕರ ಭಜನೆಯ ಮೂಲಕ ನಾಟಕವಾಡುತ್ತಿದ್ದಾರೆಂದು ಆರೋಪಿಸಿದರು. ಬಿಜೆಪಿಗರಿಗೆ ಗಣೇಶ ಪ್ರತಿಷ್ಟಾಪನೆಯ ಹಿಂದೆ ಯಾವದೇ ಭಕ್ತಿ, ಶೃದ್ದೆಗಳಿಲ್ಲ ಎಂದು ರಾಜಶೇಖರ ಮೆಣಸಿನಕಾಯಿ ಕಿಡಿಕಾರಿದ್ದಾರೆ.
Author: Karnataka Files
Post Views: 2





