ಧಾರವಾಡ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷವನ್ನು ಕಟ್ಟಿ ಬೆಳೆಸಿದ್ದ ಅಳ್ನಾವರದ ಜೆಡಿಎಸ್ ಮುಖಂಡ ಫಹಿಮ್ ಕಾಂಟ್ರಾಕ್ಟರ ಜೆಡಿಎಸ್ ಗೆ ಗುಡ್ ಬೈ ಹೇಳಿದ್ದಾರೆ.
ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರಿಗೆ ಅಪ್ತರಾಗಿದ್ದ ದಿವಂಗತ ಮುಜಾಹಿದ್ ಕಂಟ್ರಾಕ್ಟರ್ ಕುಟುಂಬ ಧಾರವಾಡ ಜಿಲ್ಲೆಯಲ್ಲಿ ಜೆಡಿಎಸ್ ಗೆ ದೊಡ್ಡ ಶಕ್ತಿಯಾಗಿತ್ತು. ಅವರ ಮಗ ಫಹಿಮ್ ಕಂಟ್ರಾಕ್ಟರ್ ಸಚಿವ ಸಂತೋಷ್ ಲಾಡ್ ಸಮ್ಮುಖದಲ್ಲಿ ಕಾಂಗ್ರೇಸ್ ಸೇರ್ಪಡೆಯಾಗಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ ಪ್ರಭಾವ ಹೊಂದಿರುವ ಫಹಿಮ್ ಜೊತೆ ಅನೇಕರು ಕಾಂಗ್ರೇಸ್ ಸೇರ್ಪಡೆಯಾಗಿದ್ದಾರೆ. ಫಹಿಮ್ ಸಹಕಾರಿ ಕ್ಷೇತ್ರದಲ್ಲಿಯೂ ಹೆಸರು ಮಾಡಿದ್ದು, ಅಳ್ನಾವರ ಪಟ್ಟಣ ಪಂಚಾಯತಿಯನ್ನು ಜೆಡಿಎಸ್ ತೆಕ್ಕೆಗೆ ಹಾಕಿಕೊಂಡಿದ್ದರು.
Author: Karnataka Files
Post Views: 8





