Download Our App

Follow us

Home » ರಾಜಕೀಯ » ಪ್ರಲ್ಲಾದ ಜೋಶಿ ವಿರುದ್ಧ ಸಿಡಿದೆದ್ದ ಶ್ರೀ. ಬಂಡಾಯದ ನೆಲದಲ್ಲಿ ದಿಂಗಾಲೇಶ್ವರ ಶ್ರೀಗಳ ರಣಕಹಳೆ

ಪ್ರಲ್ಲಾದ ಜೋಶಿ ವಿರುದ್ಧ ಸಿಡಿದೆದ್ದ ಶ್ರೀ. ಬಂಡಾಯದ ನೆಲದಲ್ಲಿ ದಿಂಗಾಲೇಶ್ವರ ಶ್ರೀಗಳ ರಣಕಹಳೆ

ರೈತ ಬಂಡಾಯದ ನೆಲ ನವಲಗುಂದದಲ್ಲಿಂದು ಫಕೀರ ದಿಂಗಾಲೇಶ್ವರ ಶ್ರೀಗಳು ಬೃಹತ್ ಸಭೆ ನಡೆಸಿದ್ರು. ಬಿಜೆಪಿ ಅಭ್ಯರ್ಥಿ ಪ್ರಲ್ಲಾದ ಜೋಶಿಯವರ ವಿರುದ್ಧ ಧರ್ಮಯುದ್ಧ ಸಾರಿರುವ ಶ್ರೀಗಳು, ಜಿಲ್ಲೆಯಲ್ಲಿ ದ್ವೇಷ ರಾಜಕಾರಣ ಕೊನೆಗೊಳಿಸಲು, ಕ್ಷೇತ್ರದಲ್ಲಿ ಅಭ್ಯರ್ಥಿ ಬದಲಾವಣೆ ಮಾಡಬೇಕೆಂದು ಸೂಚಿಸಿದ್ರು. 

ನಾನು ಯಾವದೇ ಪಕ್ಷದ ವಿರುದ್ಧ ಅಥವಾ ಪರವಾಗಿ ಇಲ್ಲ. ಆದ್ರೆ ನಾನು ಈ ಸಲ ಒಬ್ಬ ವ್ಯಕ್ತಿಯ ನಡವಳಿಕೆ ವಿರುದ್ಧ ಧರ್ಮಯುದ್ದ ಸಾರಿದ್ದೇನೆ ಎಂದರು. ಲಿಂಗಾಯತರು ಸೇರಿದಂತೆ ಅನೇಕ ವರ್ಗದ ಭಕ್ತರು ಅನ್ಯಾಯಕ್ಕೂಳಗಾಗಿದ್ದಾರೆ. ಜೋಶಿಯವರ ಬದಲು ಬೇರೆ ಅಭ್ಯರ್ಥಿ ಹಾಕುವಂತೆ ಬಿಜೆಪಿ ನಾಯಕರಿಗೆ ಮನವಿ ಮಾಡಿದ್ದೆ, ಆದ್ರೆ ಅವರು ಅಭ್ಯರ್ಥಿ ಬದಲಾಯಿಸದ ಕಾರಣ ಜನರಲ್ಲಿ ಜಾಗೃತಿ ಮೂಡಿಸಿ,  ಲೋಕಸಭಾ ಅಭ್ಯರ್ಥಿ ಬದಲಾವಣೆ ಮಾಡುವಂತೆ ಸಂಚಾರ ಕೈಗೊಂಡಿದ್ದೇವೆ ಎಂದು ಫಕೀರ ದಿಂಗಾಲೇಶ್ವರ ಶ್ರೀಗಳು ಹೇಳಿದರು.

ಸ್ವಾಭಿಮಾನಿ ಮತದಾರರ ಸಮಾವೇಶದಲ್ಲಿ 5 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ವೇದಿಕೆ ಮೇಲೆ ಅನೇಕ ಮಠಗಳ ಶ್ರೀಗಳು ಉಪಸ್ಥಿತರಿದ್ದರು.

Karnataka Files
Author: Karnataka Files

Leave a Comment

RELATED LATEST NEWS

Top Headlines

ನ್ಯೂ ಕಮಿಷನರ್ ಸೈಲೆಂಟ್ ಸ್ಟ್ರೋಕ್ : ಅವಳಿ ನಗರದಲ್ಲಿ ಅಸಲಿ ಖಾಕಿ ಖದರ್ ಶುರು….

ಹುಬ್ಬಳ್ಳಿ-ಧಾರವಾಡ ನಗರ ವ್ಯಾಪ್ತಿಯಲ್ಲಿ ಚಾಕು ಇರಿತ ಪ್ರಕರಣಗಳನ್ನು ಹತ್ತಿಕ್ಕಲು ಹೊಸದಾಗಿ ಬಂದಿರುವ ಪೊಲೀಸ್ ಕಮಿಷನರ್ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಅವಳಿ ನಗರದಲ್ಲಿ ಚಾಕು, ತಲ್ವಾರ್ ಸೇರಿದಂತೆ ಮಾರಕಾಸ್ತ್ರಗಳನ್ನು

Live Cricket

error: Content is protected !!