Download Our App

Follow us

Home » ರಾಜಕೀಯ » ಧಾರ್ಮಿಕ ಕಾರ್ಯಕ್ರಮದಲ್ಲಿ ವಕ್ಫ ವಿಚಾರ ಮಾತಾಡಿದ ಯತ್ನಾಳ. ಜನರಿಂದ ಆಕ್ಷೇಪ. ವೇದಿಕೆಯಿಂದ ಇಳಿದು ಹೊರಟ ಯತ್ನಾಳ

ಧಾರ್ಮಿಕ ಕಾರ್ಯಕ್ರಮದಲ್ಲಿ ವಕ್ಫ ವಿಚಾರ ಮಾತಾಡಿದ ಯತ್ನಾಳ. ಜನರಿಂದ ಆಕ್ಷೇಪ. ವೇದಿಕೆಯಿಂದ ಇಳಿದು ಹೊರಟ ಯತ್ನಾಳ

ಬಾಗಲಕೋಟ ಜಿಲ್ಲೆಯ ತೇರದಾಳದಲ್ಲಿ ನಿರ್ಮಿಸಿರುವ ಅಲ್ಲಮಪ್ರಭು ದೇವಾಲಯ ಉದ್ಘಾಟನೆ ಸಂದರ್ಭದಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಜನ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಭಾಷಣ ಆರಂಭವಾಗುತ್ತಿದ್ದಂತೆ ವಕ್ಫ ವಿಚಾರ ಹೇಳುತ್ತಿದ್ದಂತೆ ಅಲ್ಲಿ ಸೇರಿದ್ದ ಜನ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಧಾರ್ಮಿಕ ಕಾರ್ಯಕ್ರಮ, ಇಲ್ಲಿ ರಾಜಕೀಯ ಮಾತಾಡದಂತೆ ಸಾರ್ವಜನಿಕರು ತಾಕಿತು ಮಾಡಿದ್ದಾರೆ. 

ಎಲ್ಲಾ ಧರ್ಮದವರು ಸೇರಿ ಸುಮಾರು 6 ಕೋಟಿ ವೆಚ್ಚದಲ್ಲಿ ವಂತಿಗೆ ಸಂಗ್ರಹಿಸಿ ದೇವಸ್ಥಾನ ಕಟ್ಟಿಸಲಾಗಿದೆ. ಇಲ್ಲಿ ನಿಮ್ಮ ರಾಜಕೀಯ ಬೇಡ ಎಂದು ಜನ ತರಾಟೆಗೆ ತೆಗೆದುಕೊಂಡರು. 

ಇದು ರಾಜಕೀಯನಾ ಎಂದು ಜನರಿಗೆ ಪ್ರಶ್ನಿಸಿದ ಬಸನಗೌಡ ಪಾಟೀಲ ಯತ್ನಾಳ, ಹೌದು ನೀವು ರಾಜಕೀಯ ಮಾಡುತ್ತಿದ್ದಿರಿ ಎಂದು ಹೇಳಿದ್ದಾರೆ. 

ಆಯ್ತು ಎಂದ ಬಸನಗೌಡ ಪಾಟೀಲ ಯತ್ನಾಳ ವೇದಿಕೆಯಿಂದ ಇಳಿದು ಹೋದ ಘಟನೆ ನಡೆದಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ನವಲಗುಂದ ವಿಧಾನಸಭಾ ಕ್ಷೇತ್ರದ ಮೂರು ತಾಲೂಕು ಬರಪೀಡಿತ ಘೋಷಣೆ: ಧಾರವಾಡ ತಾಲೂಕು ನಿರ್ಲಕ್ಷ್ಯ ಆರೋಪ

ನವಲಗುಂದ: ಮಳೆ ಅಭಾವದ ಹಿನ್ನೆಲೆಯಲ್ಲಿ ಸರ್ಕಾರ ಎರಡನೇ ಹಂತದಲ್ಲಿ ರಾಜ್ಯದ 24 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿದ್ದು, ಧಾರವಾಡ ಜಿಲ್ಲೆಯ ನವಲಗುಂದ, ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ತಾಲೂಕುಗಳು

Live Cricket

error: Content is protected !!