ಇಂದು ಡಿಸೆಂಬರ್ 31, ಬಾರ್ ಅಂಗಡಿಯವರಿಗೆ ಇಂದು ಹಬ್ಬದ ಸಡಗರ. ಹೊಸ ವರ್ಷಾಚರಣೆಗೆ ಹುಬ್ಬಳ್ಳಿ ಧಾರವಾಡದ ಬಾರ್ ಅಂಗಡಿಗಳು ಮಧುವಣಗಿತ್ತಿಯಂತೆ ಶೃಂಗಾರಗೊಂಡಿವೆ.
ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ 300 ಬಾರ್ ಗಳಿವೆ. 300 ಬಾರ್ ಗಳ ಮಾಲೀಕರು ಉತ್ತಮ ವ್ಯಾಪಾರದ ನಿರೀಕ್ಷೆಯಲ್ಲಿದ್ದಾರೆ.
ಕಳೆದ ವರ್ಷ ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಡಿಸೆಂಬರ್ 31 ರಂದು ಅಂದಾಜು ಸುಮಾರು ನಾಲ್ಕು ಕೋಟಿಯಷ್ಟು ಮದ್ಯ ಮಾರಾಟವಾಗಿತ್ತು.
ಈ ಸಲದ ಡಿಸೆಂಬರ್ 31 ರಂದು ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ 5 ಕೋಟಿ ವ್ಯಾಪಾರ ನಿರೀಕ್ಷೆ ಮಾಡಲಾಗಿದೆ ಎಂದು ವ್ಯಾಪಾರಿಯೊಬ್ಬರು ಕರ್ನಾಟಕ ಫೈಲ್ಸ್ ಗೆ ತಿಳಿಸಿದ್ದಾರೆ.
Author: Karnataka Files
Post Views: 1





