Download Our App

Follow us

Home » ರಾಜಕೀಯ » ನವಲಗುಂದ ರಾಜಕಾರಣಕ್ಕೆ ಮತ್ತೊಬ್ಬ ಮುಖಂಡನ ಎಂಟ್ರಿ. ಅಂದು ಶಂಕರ ಪಾಟೀಲ, ಇಂದು ಜೋಶಿ ಫೋಟೋ. ಗೊಂದಲ, ಗೊಂದಲ

ನವಲಗುಂದ ರಾಜಕಾರಣಕ್ಕೆ ಮತ್ತೊಬ್ಬ ಮುಖಂಡನ ಎಂಟ್ರಿ. ಅಂದು ಶಂಕರ ಪಾಟೀಲ, ಇಂದು ಜೋಶಿ ಫೋಟೋ. ಗೊಂದಲ, ಗೊಂದಲ

ನವಲಗುಂದ ಕ್ಷೇತ್ರದ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರ ಸಂಬಂಧಿಕರೆಂದು ಗುರುತಿಸಿಕೊಂಡಿದ್ದ ದೇವರಾಜ ದಾಡಿಬಾವಿ, ನವಲಗುಂದ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದಾರೆ. 

ಈ ಹಿಂದೆ ಶಂಕರ ಪಾಟೀಲ ಮುನೇನಕೊಪ್ಪ ಅವರ ಫೋಟೋ ಬಳಸುತ್ತಿದ್ದ ದೇವರಾಜ ಇದೀಗ ದಿಡೀರನೇ ಕೇಂದ್ರ ಸಚಿವ ಪ್ರಲ್ಲಾದ ಜೋಶಿಯವರ ಭಾವಚಿತ್ರ ಬಳಸುತ್ತಿದ್ದು, ಏನು ಮತ್ತು ಯಾವ ಸಂದೇಶ ಹೊತ್ತು ಬಂದಿದ್ದಾರೆ ಅನ್ನೋದು ಚರ್ಚೆಗೆ ಗ್ರಾಸವಾಗಿದೆ. 

ಶಂಕರ ಪಾಟೀಲ ಮುನೇನಕೊಪ್ಪ ಅಭಿಮಾನಿ ಬಳಗದ ಹೆಸರಿನಲ್ಲಿ ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದ ದೇವರಾಜ, ಇದೀಗ ಮುನೇನಕೊಪ್ಪ ಅವರ ಪೋಟೋ ಬದಲು, ಕೇಂದ್ರ ಸಚಿವರ ಫೋಟೋದ ಜೊತೆಗೆ ಫೀಲ್ಡಿಗೆ ಇಳಿದಿರುವದು ಹಲವು ಸಂಶಯಗಳಿಗೆ ಎಡೆಮಾಡಿದೆ.

ದೇವರಾಜ ದಾಡಿಬಾವಿ ನವಲಗುಂದ ಕ್ಷೇತ್ರದಲ್ಲಿ ಓಡಾಡುತ್ತಿದ್ದು, ಶಂಕರ ಪಾಟೀಲರ ಪರ ಪಕ್ಷ ಸಂಘಟನೆ ಮಾಡುತ್ತಿದ್ದಾರಾ ಅಥವಾ ಒಂದು ಕೈ ನೋಡೋಣ ಅಂತ ನಿರ್ಧರಿಸಿದ್ದಾರಾ ಅನ್ನೋದು ಗೊತ್ತಾಗಬೇಕಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ನವಲಗುಂದ ನರಗುಂದ ರೈತ ಬಂಡಾಯಕ್ಕೆ 46 ವರ್ಷ ಪೂರ್ಣ : ರೈತರ ಪಾದಕ್ಕೆ ಶರಣಾಗಿದ್ದ ಕಾಂಗ್ರೇಸ್ ಸರ್ಕಾರ : ಅಂದು ನಡೆದಿದ್ದು ಏನು? ಇಲ್ಲಿದೆ ಡಿಟೇಲ್ ಸ್ಟೋರಿ

ನವಲಗುಂದ ನರಗುಂದ ರೈತ ಬಂಡಾಯ ನಡೆದು ಇವತ್ತಿಗೆ 46 ವರ್ಷಗಳು ಪೂರ್ಣಗೊಂಡಿವೆ. ಪ್ರತಿ ವರ್ಷ ಜುಲೈ 21 ರಂದು ರೈತರು, ಈ ದಿನವನ್ನು ರೈತ ಹುತಾತ್ಮ ದಿನಾಚರಣೆ

Live Cricket

error: Content is protected !!