Download Our App

Follow us

Home » ಜೀವನಶೈಲಿ » ವಿದ್ಯಾಕಾಶಿ ಧಾರವಾಡಕ್ಕೆ ಓದಲು ಬಂದವರು ಬದುಕು ಕಟ್ಟಿಕೊಂಡರು. ಸರ್ಕಾರಿ ನೌಕರಿ ಮೀರಿಸುವಷ್ಟು ಆದಾಯ ಗಳಿಕೆ

ವಿದ್ಯಾಕಾಶಿ ಧಾರವಾಡಕ್ಕೆ ಓದಲು ಬಂದವರು ಬದುಕು ಕಟ್ಟಿಕೊಂಡರು. ಸರ್ಕಾರಿ ನೌಕರಿ ಮೀರಿಸುವಷ್ಟು ಆದಾಯ ಗಳಿಕೆ

ಧಾರವಾಡ ಶೈಕ್ಷಣಿಕ ಕಾಶಿ, ಓದು ಅಂತಾ ಬಂದಾಗ ತಟ್ಟನೆ ನೆನಪಾಗೋದೆ ಧಾರವಾಡ. ಧಾರವಾಡ ಅಂತಹದೊಂದು ಛಾಪು ಒತ್ತಿದೆ. 

ನೂರಾರು ಕನಸುಗಳನ್ನು ಕಟ್ಟಿಕೊಂಡು ಬರುವ ಲಕ್ಷಾಂತರ ವಿದ್ಯಾರ್ಥಿಗಳ ಬದುಕಲ್ಲಿ ಧಾರವಾಡ ಎಂಬ ನಗರ ಬೆಳಕು ಹರಿಸಿದೆ. 

ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳು ಏನಾದರೂ ಸರ್ಕಾರಿ ಕೆಲಸ ಗಿಟ್ಟಿಸಬೇಕು ಎಂದು ಧಾರವಾಡಕ್ಕೆ ಬರುತ್ತಾರೆ. 

ರಾತ್ರಿ ಹಗಲು ಕಷ್ಟ ಪಟ್ಟು ಓದಿದ ನಂತರ ಸರ್ಕಾರಿ ಕೆಲಸ ಸಿಗಲಿಲ್ಲ ಎಂದು ದಿನೇಶ್ ಎಂಬುವವರು ಸುಮ್ಮನೆ ಕುಳಿತು ಕೊಳ್ಳಲಿಲ್ಲ. ಬದುಕು ಕಟ್ಟಿಕೊಳ್ಳಲು ಚಹಾ ಅಂಗಡಿ ಶುರು ಮಾಡಿದರು.

ಧಾರವಾಡದ ಶ್ರೀನಗರದಲ್ಲಿ   ಅವರು ಶ್ರೀ ಸಾಯಿರಾಮ್ ಎಂಬ ಸಣ್ಣ ಅಂಗಡಿ ಆರಂಭಿಸಿದ್ದಾರೆ. ಇವರ ಅಂಗಡಿಯ ಚಹಾ, ಕಾಫಿ, ಲೇಮನ್ ಟೀ ತುಂಬಾ ಫೇಮಸ್ ಆಗಿದೆ.

ಸರ್ಕಾರಿ ನೌಕರ ಪಡೆಯುವ ಸಂಬಳಕ್ಕಿಂತಲೂ ಹೆಚ್ಚು ಆದಾಯ ಗಳಿಸುತ್ತಿರುವ ದಿನೇಶ ಅವರು ನಿರುದ್ಯೋಗಿಗಳಿಗೆ ಮಾದರಿ.

ಸರ್ಕಾರಿ ನೌಕರಿ ಸಿಗದೇ ಇದ್ದಾಗ, ನಂಬಿ ಬಂದ ಧಾರವಾಡ ನಗರ, ದಿನೇಶ ಅವರ ಜೀವನಕ್ಕೆ ದಾರಿ ಮಾಡಿಕೊಟ್ಟಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ನವಲಗುಂದ ನರಗುಂದ ರೈತ ಬಂಡಾಯಕ್ಕೆ 46 ವರ್ಷ ಪೂರ್ಣ : ರೈತರ ಪಾದಕ್ಕೆ ಶರಣಾಗಿದ್ದ ಕಾಂಗ್ರೇಸ್ ಸರ್ಕಾರ : ಅಂದು ನಡೆದಿದ್ದು ಏನು? ಇಲ್ಲಿದೆ ಡಿಟೇಲ್ ಸ್ಟೋರಿ

ನವಲಗುಂದ ನರಗುಂದ ರೈತ ಬಂಡಾಯ ನಡೆದು ಇವತ್ತಿಗೆ 46 ವರ್ಷಗಳು ಪೂರ್ಣಗೊಂಡಿವೆ. ಪ್ರತಿ ವರ್ಷ ಜುಲೈ 21 ರಂದು ರೈತರು, ಈ ದಿನವನ್ನು ರೈತ ಹುತಾತ್ಮ ದಿನಾಚರಣೆ

Live Cricket

error: Content is protected !!