ನವಲಗುಂದ ತಾಲೂಕಿನ ಅಹಿಂದ ನಾಯಕರಾಗಿದ್ದ ಬಸವರಾಜ ಶಲವಡಿ ಇಂದು ನಿಧನರಾದರು.
ಮೃತರು ಅಪಾರ ಬಂಧು ಬಳಗವನ್ನು ಹೊಂದಿದ್ದರು. ಮೃತ ಬಸವರಾಜ ಶಲವಡಿ ಕಾಂಗ್ರೇಸ್ ಪಕ್ಷದ ನಾಯಕರಾಗಿದ್ದರು.
ಮೃತರ ಅಂತ್ಯಕ್ರಿಯೆ ನವಲಗುಂದ ತಾಲೂಕಿನ ಬೆಳಹಾರ ಗ್ರಾಮದಲ್ಲಿ ಇಂದು ಸಂಜೆ 5 ಘಂಟೆಗೆ ನಡೆಯಲಿದೆ.
ಶಾಸಕ ಎನ್ ಎಚ್ ಕೋನರೆಡ್ಡಿ, ಮಾಜಿ ಸಚಿವರಾದ ಕೆ ಎನ್ ಗಡ್ಡಿ, ಶಂಕರ ಪಾಟೀಲ ಮುನೇನಕೊಪ್ಪ, ವಿನೋದ ಅಸೂಟಿ ಸೇರಿದಂತೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.
Author: Karnataka Files
Post Views: 28




