Download Our App

Follow us

Home » ರಾಜಕೀಯ » ಧಾರವಾಡ ಜಿಲ್ಲೆಯ ಶಾಸಕರು ಸಂಸದರಿಗೆ ರೈತನ ಮಗನ ಮನ ಕಲಕುವ ಪ್ರಶ್ನೆ

ಧಾರವಾಡ ಜಿಲ್ಲೆಯ ಶಾಸಕರು ಸಂಸದರಿಗೆ ರೈತನ ಮಗನ ಮನ ಕಲಕುವ ಪ್ರಶ್ನೆ

ಮುಂಗಾರು ಕ್ಷಿಣವಾಗುತ್ತ ಹೊರಟಿದ್ದು, ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತನಿಗ ಮೋಡದತ್ತ ಮುಖ ಮಾಡಿದ್ದಾನೆ. ಬರಗಾಲದ ಛಾಯೆ ಆವರಿಸುವ ಎಲ್ಲ ಲಕ್ಷಣಗಳು ಗೋಚರವಾಗುತ್ತಿದ್ದು ರೈತ ಕುಲ ಆತಂಕದಲ್ಲಿದೆ.

ಧಾರವಾಡ ಜಿಲ್ಲೆಯ ರೈತನ ಮಗನೊಬ್ಬ ಧಾರವಾಡ ಜಿಲ್ಲೆಯ ಶಾಸಕರು ಹಾಗೂ ಸಂಸದರಿಗೆ ಮನಕಲಕುವ ಪ್ರಶ್ನೆ ಕೇಳಿದ್ದಾನೆ. ಆತನ ಪತ್ರದ ಸಾರಾಂಶ ಹೀಗಿದೆ.

ನನ್ನ ಎಲ್ಲ ರೈತ ಬಾಂಧವರಿಗೆ ನನ್ನ ನಮಸ್ಕಾರ🙏

ನಮ್ಮ ಹತ್ತಿರದ ಹಾವೇರಿ ಜಿಲ್ಲೆಯಲ್ಲಿ ಮಳೆ ಇಲ್ಲದ ಕಾರಣ ಆ ಜಿಲ್ಲೆಯ ಶಾಸಕರು ಗಳು ತಮ್ಮ ಸ್ವಂತ ಹಣದಿಂದ ಮೊಡ ಬಿತ್ತನೆ ಮಾಡಿದ್ದಾರೆ.

ಆದರೆ ನಮ್ಮ ಧಾರವಾಡ ಜಿಲ್ಲೆಯ ಶಾಸಕರುಗಳು ಏನು ಮಾಡ್ತಾ ಇದ್ದಾರೆ ನನ್ನ ಮೊದಲ ಪ್ರಶ್ನೆ ?

ನಮ್ಮ ರೈತರು ಯಾಕೆ ನೀವು ನಿಮ್ಮ ನಿಮ್ಮ ತಾಲೂಕಿನ ಶಾಸಕರು ಯಾಕೆ ನೀವು ಪ್ರಶ್ನೆ ಮಾಡುತ್ತಿಲ್ಲ ?

ಬೇಗನೆ ನಮ್ಮ ಧಾರವಾಡ ಜಿಲ್ಲೆ ಶಾಸಕರು ಸಂಸದರು ಮಾತನಾಡ್ಕೊಂಡ್ ಮೋಡ್ ಬಿತ್ತಾನೆ ಮಾಡಬೇಕು ಎಂದು ತಮ್ಮಲಿ ವಿನಿಂತಿ.

ರೈತರ ಈ ಮನವಿಗೆ ಬೇಗನೆ ಸ್ಪಂದಿಸಿ ಧನ್ಯವಾದಗಳು

ಜೈ ಜವಾನ್ ಜೈ ಕಿಸಾನ್!

ಇಂತಿ ನಿಮ್ಮ ರೈತನ ಮಗ

ಓಬಳೇಪ್ಪ ನಿ ಹಂಚಿನಾಳ

ನವಲಗುಂದ.

M:9663929624

ಹೀಗೆ ಬರೆದು ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿರುವ ರೈತನ ಮಗ, ರೈತ ಕುಲದ ಅಳಲನ್ನು ತೋಡಿಕೊಂಡಿದ್ದಾನೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ನವಲಗುಂದ ನರಗುಂದ ರೈತ ಬಂಡಾಯಕ್ಕೆ 46 ವರ್ಷ ಪೂರ್ಣ : ರೈತರ ಪಾದಕ್ಕೆ ಶರಣಾಗಿದ್ದ ಕಾಂಗ್ರೇಸ್ ಸರ್ಕಾರ : ಅಂದು ನಡೆದಿದ್ದು ಏನು? ಇಲ್ಲಿದೆ ಡಿಟೇಲ್ ಸ್ಟೋರಿ

ನವಲಗುಂದ ನರಗುಂದ ರೈತ ಬಂಡಾಯ ನಡೆದು ಇವತ್ತಿಗೆ 46 ವರ್ಷಗಳು ಪೂರ್ಣಗೊಂಡಿವೆ. ಪ್ರತಿ ವರ್ಷ ಜುಲೈ 21 ರಂದು ರೈತರು, ಈ ದಿನವನ್ನು ರೈತ ಹುತಾತ್ಮ ದಿನಾಚರಣೆ

Live Cricket

error: Content is protected !!