ತನ್ನ ನಟನೆಯ ಮೂಲಕ ಕನ್ನಡಿಗರ ಮನಸ್ಸು ಗೆದ್ದಿರುವ, ಧಾರವಾಡದ ಕಾಮಿಡಿ ಕಿಂಗ್ ಖಾಜಾ ಅಲಿಯಾಸ್ ಮುಕಳೆಪ್ಪನ ಹೆಂಡತಿಯ ಸೀಮಂತ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಮುಕಳೆಪ್ಪ, ಗಾಯತ್ರಿ ಎಂಬ ಹಿಂದೂ ಹುಡುಗಿಯನ್ನು ಮದುವೆಯಾಗಿದ್ದ ಸಂದರ್ಭದಲ್ಲಿ ಲವ್ ಜಿಹಾದ್ ಹೆಸರಿನಲ್ಲಿ ದೊಡ್ಡ ಸಂಘರ್ಷ ನಡೆದಿತ್ತು. ಹಿಂದೂ ಪರ ಸಂಘಟನೆಗಳು ಬೀದಿಗೆ ಇಳಿದು ಹೋರಾಟ ಮಾಡಿದ್ದವು.
ಇದೀಗ ಸೀಮಂತ ಕಾರ್ಯವನ್ನು ಹಿಂದೂ ಸಂಪ್ರದಾಯದಂತೆ ನಡೆಸಿ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. ಜಾತಿಗಿಂತ ಪ್ರೀತಿ ಗೆದ್ದಿದೆ.
Author: Karnataka Files
Post Views: 864





