ಧಾರವಾಡ ನಿರ್ಮಿತಿ ಕೇಂದ್ರದ ಕಚೇರಿಯಲ್ಲಿ ಇದೀಗ ದ್ವೇಷ, ಅಸೂಯೆ ಕಾರ್ಮೋಡ ಕವಿದಿದೆ.
ಅಧಿಕಾರಿಗಳ ಮಧ್ಯೆ ಸಂಘರ್ಷ ತಾರಕಕ್ಕೇರಿದ್ದು, ಮೊನ್ನೆಯಷ್ಟೇ ಇಂಜಿನಿಯರ ಮೇಲೆ ನಡೆದ ಲೋಕಾಯುಕ್ತ ದಾಳಿಯ ಹಿಂದೆ ಅಲ್ಲಿಯೇ ಇರುವ ಅಧಿಕಾರಿಯ ಮಸಲತ್ತಿನ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ.
ನಟ ದೊಡ್ಡಣ್ಣನ ಡೈಲಾಗ್ ನಂತೆ ಜಿತನಾ ಛೋಟಾ ಊತನಾ ಖೋಟಾ ಎಂಬಂತೆ, ಒಬ್ಬೊಬ್ಬರನ್ನೆ ಮಣ್ಣು ಮುಕ್ಕಿಸುವ ಹುನ್ನಾರ ನಡೆದಿದೆ.
ಅಲ್ಲಿಂದ ಕುಮಾರರನ್ನು ಹೊರಹಾಕಿದರೆ ಸಾಕು, ಎನ್ ಬೇಕಾದ್ದನ್ನು ಮಾಡಬಹುದು ಅನ್ನೋ ದುರಾಸೆ, ಅಸೂಯೆ, ಲೋಕಾ ದಾಳಿಯ ಹಿಂದೆ ಅಡಗಿದೆ ಅನ್ನೋ ಚರ್ಚೆಗಳು ನಡೆದಿವೆ.
ಓರ್ವ PA ಗೆ ಮನೆ ಕಟ್ಟಿ ಕೊಡುತ್ತಿರುವ ಅಧಿಕಾರಿಯ ಬಗ್ಗೆ ಕೆಲ ಮಾಹಿತಿಗಳು ಕರ್ನಾಟಕ ಫೈಲ್ಸ್ ಗೆ ಸಿಕ್ಕಿದ್ದು, ಅರ್ಧ ಕೋಟಿ ವೆಚ್ಚ ಮಾಡಲಾಗುತ್ತಿದೆ ಅನ್ನೋದಾದರೆ, ಯಾವ ಮಟ್ಟಕ್ಕೆ ಆತ ಲೂಟಿ ಮಾಡಿರಬಹುದು ಅನ್ನೋದು ಬಯಲಿಗೆ ಬರಲಿದೆ.
Author: Karnataka Files
Post Views: 487





