ಅವಿನಾಶರ ಕುರಿತು ಥಾಮಸ್ ಹೀಗೆ ಬರೆಯುತ್ತಾರೆ
ಒಬ್ಬ ಪತ್ರಕರ್ತನಿಗೆ ತನ್ನ ವೃತ್ತಿಜೀವನದಲ್ಲಿ ಸಾರ್ಥಕತೆ ಹಾಗೂ ಆತ್ಮತೃಪ್ತಿ ಸಿಗೋದು ಆತನ ವರದಿಗಳಿಗೆ.
ಕನ್ನಡಪ್ರಭದ ಹಿರಿಯ ವರದಿಗಾರ ಎಚ್.ಎಸ್ ಅವಿನಾಶ್ ಕೆಪಿಎಸ್ಸಿ( KPSC) ಅಧ್ಯಕ್ಷರ ಕರ್ಮಕಾಂಡದ ಬಗ್ಗೆ ಎಳೆಎಳೆಯಾಗಿ ಅವರು ಮಾಡಿದ ಸರಣಿ ವರದಿಗಳು ಇವತ್ತು ಇಂಪ್ಯಾಕ್ಟ್ ಮಾಡಿವೆ.
KPSC ಅಧ್ಯಕ್ಷರನ್ನು ರಾಜ್ಯಪಾಲರ ಆದೇಶದ ಮೇಲೆ ವಜಾ ಮಾಡಲಾಗಿದೆ.
ಕರ್ನಾಟಕದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು, ತಮ್ಮ ಇಬ್ಬರು ಹೆಣ್ಣುಮಕ್ಕಳನ್ನು ಸರ್ಕಾರಿ ಉದ್ಯೋಗಗಳಿಗೆ ಅಕ್ರಮವಾಗಿ ಆಯ್ಕೆ ಮಾಡಲು ಅನುಕೂಲ ಮಾಡಿಕೊಟ್ಟ ಆರೋಪದ ಮೇಲೆ ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕರ್ ಅವರನ್ನು ಅಮಾನತುಗೊಳಿಸಿದ್ದಾರೆ.
ಸಂವಿಧಾನದ 317(1) ನೇ ವಿಧಿಯ ಅಡಿಯಲ್ಲಿ ತನಿಖೆಗಾಗಿ ಈ ವಿಷಯವನ್ನು ಸುಪ್ರೀಂ ಕೋರ್ಟ್‌ಗೆ ಉಲ್ಲೇಖಿಸುವಂತೆ ರಾಜ್ಯಪಾಲರು ಭಾರತದ ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಿದ್ದಾರೆ.
ಕೆಪಿಎಸ್ಸಿ( KPSC) ಅಧ್ಯಕ್ಷರ ಕರ್ಮಕಾಂಡದ ಬಗ್ಗೆ ಅವಿನಾಶ ವರದಿ ಮಾಡಿದ್ದರು. ಅವಿನಾಶ ಅವರು ಬರೆದ ಈ ವರದಿ ರಾಜ್ಯದಲ್ಲಿ ಆಡಳಿತ ವ್ಯವಸ್ಥೆಯನ್ನೇ ಅಲುಗಾಡಿಸಿತ್ತು.
2008-09 ರ ಅವಧಿಯಲ್ಲಿ ಧಾರವಾಡದಲ್ಲಿ ಕನ್ನಡಪ್ರಭ ವರದಿಗಾರರಾಗಿದ್ದ ಸಂದರ್ಭದಲ್ಲಿ, ಅವಿನಾಶ ಅವರು ವರದಿಗಾರರಾಗಿದ್ದುಕೊಂಡು, ರೈಲ್ವೇ ನಿಲ್ದಾಣದಲ್ಲಿ ಪತ್ರಿಕೆ ಮಾರಾಟ ಮಾಡುತ್ತಿದ್ದರು.
ಅವಿನಾಶ ಅವರು ಬಯಲಿಗೆ ಎಳೆದ KPSC ಕರ್ಮಕಾಂಡ, ರಾಜ್ಯದಲ್ಲಿ ದೊಡ್ಡ ಸಂಚಲನ ಸೃಷ್ಟಿ ಮಾಡಿದ್ದು, ಅವಿನಾಶರ ವರದಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.





