ಧಾರವಾಡದ ರಂಕಾ ಅಪಾರ್ಟ್ಮೆಂಟ್ ನಲ್ಲಿ ಪಾಪಿ ಪತ್ನಿ ತನ್ನ ವೈದ್ಯ ಪತಿಯನ್ನು ಕೊಲೆ ಮಾಡಿದ ಭೀಕರ ಘಟನೆ ನಡೆದಿದೆ.
ಪಾಪಿ ಪತ್ನಿ ಗಂಡನ ಕೊಲೆಗೈದು ಮಗನ ಮೇಲೂ ರಾಕ್ಷಸಿ ದಾಳಿ ಮಾಡಿದ್ದಾಳೆ.
ರಾಕ್ಷಸಿ ಪತ್ನಿ ಪ್ರಿಯಾಂಕಾ ಈ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ.
ಮಗ ನೇಹಿತ್ , ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದು, ಮಗು ಉಸಿರಾಡುತ್ತಿದ್ದುದ್ದನ್ನು ಗಮನಿಸಿದ ಪೊಲೀಸ ಆಯುಕ್ತ ಎನ್ ಶಶಿಕುಮಾರ ತಾವೇ ಸ್ವತಃ ಮಗುವನ್ನು ಎತ್ತಿಕೊಂಡು ಬಂದು ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
ಡಾಕ್ಟರ್ ಕಿರಣ್ ಹೊನಣ್ಣವರ್(45) ಹತ್ಯೆಯಾದ ದುರ್ದೈವಿಯಾಗಿದ್ದಾನೆ
ಎಂಟು ವರ್ಷದ ಮಗ ನೇಹಿತ್ ಮೇಲೂ ಚಾಕು ದಾಳಿ ಮಾಡಿರುವ ಪ್ರಿಯಾಂಕಾ ರಾಕ್ಷಸ ಪ್ರವೃತ್ತಿ ಮೆರೆದಿದ್ದಾಳೆ.
ಒಂದು ರೂಮ್ ನಲ್ಲಿ ಗಂಡನ ಬರ್ಬರ ಕೊಲೆ ಮಾಡಿ ಬಂದ ಪತ್ನಿ, ಮತ್ತೊಂದು ರೂಮ್ ನಲ್ಲಿ ಇದ್ದ ಮಗುವಿಗೆ ಚಾಕು ಇರಿದು ಮೊಬೈಲ್ ನೋಡುತ್ತಾ ಕುಳಿತಿದ್ದಳು ಎನ್ನಲಾಗಿದೆ.
ರಕ್ತದ ಮಡುವಿನಲ್ಲಿ ಬಿದ್ದಿದ ಮಗನ ಜೊತೆ ತಾಯಿ ಮೊಬೈಲ್ ನೋಡ್ತಿದ್ದಳು ಎನ್ನಲಾಗಿದೆ.
ಸದ್ಯ ಪತ್ನಿ ಪ್ರಿಯಾಂಕಾಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರಕ್ತದ ಮಡುವಿನಿಲ್ಲಿ ಉಸಿರಾಡುತ್ತಿದ್ದ ಮಗುವನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಹು-ಧಾ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರೇ ಆಸ್ಪತ್ರೆಗೆ ರವಾನೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಅಪಾರ್ಟ್ಮೆಂಟ್ ನಲ್ಲಿ ಕಿರಣ್ ಸಹೋದರಿಯರ ಆಕ್ರಂದನ ಮುಗಿಲು ಮುಟ್ಟಿದೆ.





