ನಿವೃತ್ತರ ಸ್ವರ್ಗ, ಸುಸಂಸ್ಕೃತ ನಗರಿ ಧಾರವಾಡದಲ್ಲಿ ನಡೆಯಬಾರದೆಲ್ಲ ನಡೆಯುತ್ತಿದೆ.
ಆರೋಗ್ಯಕ್ಕೆ ಹಾನಿ ಮಾಡಬಲ್ಲ ಹಾಗೂ ಲಕ್ಷಾಂತರ ರೂಪಾಯಿ ಕಮಾಯಿ ಮಾಡಬಲ್ಲ ವ್ಯವಸ್ಥಿತ ಮಾಫಿಯಾ ಇದೀಗ ಧಾರವಾಡದಲ್ಲಿ ಅವ್ಯಾಹತವಾಗಿ ಜಾಲ ಹೊಂದಿದೆ.
ಅಂದ ಹಾಗೇ ಧಾರವಾಡ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಕಲಿ ಔಷಧಿಗಳ ಮಾರಾಟ ಜೋರಾಗಿದೆ. ಶಹರ ಠಾಣೆ ವ್ಯಾಪ್ತಿಯ ಜನನಿಬಿಡ ರಸ್ತೆಯಲ್ಲಿ ಈ ನಕಲಿ ಔಷಧಿಗಳನ್ನು ಮಾರಾಟ ಮಾಡಲಾಗುತ್ತಿದೆ.
ಎಲ್ಲವೂ ಗೊತ್ತಿದ್ದೂ, ಗೊತ್ತಿಲ್ಲದಂತೆ ನಟಿಸುವ ಕೆಲವರ ಮುಖವಾಡ ಕರ್ನಾಟಕ ಫೈಲ್ಸ್, ಧಾಖಲೆ ಸಮೇತ ಬಯಲಿಗೆ ಎಳೆಯಲಿದೆ.
ಮೊಣಕಾಲು ನೋವು, ತಲೆನೋವು, ಚರ್ಮವ್ಯಾದಿ ಸೇರಿದಂತೆ ಅನೇಕ ರೋಗಗಳು ಮಾಯವಾಗುತ್ತವೆ ಎಂದು ನಂಬಿಸಿ ಜನರಿಗೆ ಲಕ್ಷಾಂತರ ರೂಪಾಯಿ ಪಂಗನಾಮ ಹಾಕಲಾಗುತ್ತಿದೆ.
ನಕಲಿ ಔಷಧಿ ಮಾರಾಟ ಮಾಡಿ ನಮ್ಮನ್ನು ವಂಚಿಸಲಾಗಿದೆ ಎಂದು ಮೋಸ ಹೋದವರು ಠಾಣೆಯ ಮೆಟ್ಟಲು ಹತ್ತಿ, ಸ್ಪಂದನೆ ಸಿಗದೇ, ಪೊಲೀಸ್ ವ್ಯವಸ್ಥೆ ಬಗ್ಗೆ ರೋಸಿ ಹೋಗಿದ್ದಾರೆ.
ಖಡಕ್ ಕಮಿಷನರ್ ಎಂದು ಹೆಸರು ಮಾಡಿರುವ ಎನ್ ಶಶಿಕುಮಾರ ಅವರು ಹಗಲು ರಾತ್ರಿ ಎನ್ನದೆ ಶ್ರಮ ಹಾಕುತ್ತಿದ್ದರೆ, ಕೆಲವರು ಅವರ ಶ್ರಮಕ್ಕೆ ತಣ್ಣೀರೆರಚುವ ಕಾರ್ಯದಲ್ಲಿ ತೊಡಗಿದ್ದಾರೆ.





