ಧಾರವಾಡದಲ್ಲಿ ಬೀಡಾಡಿ ನಾಯಿಗಳ ಹಾವಳಿ ಜೋರಾಗಿದೆ.
ಬೀಡಾಡಿ ನಾಯಿಗಳನ್ನು ಹಿಡಿದಿರುವದಾಗಿ ಹೇಳಿ, ಅವುಗಳ ಸಂತಾನ ಹರಣ ಮಾಡಿರುವ ನೆಪವೊಡ್ಡಿ, ಲಕ್ಷಾಂತರ ರೂಪಾಯಿ ಖರ್ಚು ಹಾಕುವ ಪಾಲಿಕೆಗೆ ಜನ ಹಿಡಿಶಾಪ ಹಾಕುತ್ತಿದ್ದಾರೆ.
ಒಂದು ಅಂದಾಜಿನ ಪ್ರಕಾರ ಧಾರವಾಡದಲ್ಲಿ 15 ಸಾವಿರಕ್ಕೂ ಹೆಚ್ಚು ಬೀಡಾಡಿ ನಾಯಿಗಳಿವೆ ಎನ್ನಲಾಗಿದೆ.
ಬೀಡಾಡಿ ನಾಯಿಗಳಿಗೆ, ಕಸಾಯಿಖಾನೆಯ ತ್ಯಾಜ್ಯವನ್ನು ನಿತ್ಯ ಉಣ್ಣಿಸುವವರ ಮೇಲೆ ಕ್ರಮ ಜರುಗಿಸಬೇಕೆಂದು ಸಾಮಾಜಿಕ ಚಿಂತಕ ಹರ್ಷವರ್ಧನ ಶೀಲವಂತರ ಆಗ್ರಹಿಸಿದ್ದಾರೆ.
ಧಾರವಾಡದ ಮಾಳಮಡ್ಡಿಯ ಪ್ರಧಾನ ಅಂಚೆ ಕಚೇರಿ ಎದುರು ನಿತ್ಯ ಬೀಡಾಡಿ ನಾಯಿಗಳು, ಹೋಟೆಲ್ ನವರು ಎಸೆಯುವ ತ್ಯಾಜ್ಯವನ್ನು ಪಾದಚಾರಿ ಮಾರ್ಗದಲ್ಲಿ ತಂದು ತಿನ್ನುತ್ತಿವೆ.
ಕೋಳಿ ಕಾಲು ಎಲ್ಲೆಂದರಲ್ಲಿ ಬಿದ್ದಿದ್ದು, ಹಲವರು ನಾಯಿ ಕಡಿತಕ್ಕೂ ಒಳಗಾಗಿದ್ದಾರೆ.
Author: Karnataka Files
Post Views: 245





