Download Our App

Follow us

Home » ಕಾನೂನು » ಧಾರವಾಡ ಶಹರ ಪೊಲೀಸ್ ಠಾಣೆ ವ್ಯಾಪ್ತಿ : ದೋ ನಂಬರ ದಂಧೆಯ ತಾಣ : ಖಾಕಿ ಮೇಲಿನ ನಂಬಿಕೆ ಮಣ್ಣು ಪಾಲು

ಧಾರವಾಡ ಶಹರ ಪೊಲೀಸ್ ಠಾಣೆ ವ್ಯಾಪ್ತಿ : ದೋ ನಂಬರ ದಂಧೆಯ ತಾಣ : ಖಾಕಿ ಮೇಲಿನ ನಂಬಿಕೆ ಮಣ್ಣು ಪಾಲು

ಧಾರವಾಡದ ನೆಲದಲ್ಲಿ ನಿಂತು ಎಲ್ಲೆಂದರಲ್ಲಿ ಕಲ್ಲು ಒಗೆದರೆ,  ಆ ಕಲ್ಲು ಒಬ್ಬ ಸಾಹಿತಿ ಅಥವಾ ಸಂಗೀತಗಾರನ ಮನೆಯ ಮೇಲೆ ಬೀಳುತ್ತದೆ ಅನ್ನೋ ಮಾತು ಒಂದು ಕಾಲಕ್ಕೆ ಜನಪ್ರಿಯಗೊಂಡಿತ್ತು.

ಆದ್ರೆ ಇದೀಗ ಧಾರವಾಡ ಬದಲಾಗಿದೆ. ಹಣದ ವ್ಯಾಮೋಹ,  ಧಾರವಾಡ ನಗರವನ್ನು ಮಲಿನಗೊಳಿಸಿದೆ.  ಅನಾಗರಿಕ, ಆಕ್ರಮ ಚಟುವಟಿಕೆ ತಡೆಗಟ್ಟಬೇಕಾದ  ಶಹರ ಠಾಣೆಯ ಕೆಲವು ಪೊಲೀಸರು  ಡೀಲ್ ನಲ್ಲಿ ಮುಳುಗಿದ್ದು, ಧಾರವಾಡ ಹಾದಿ ತಪ್ಪುತ್ತಿದೆ.

ಸಾಹಿತಿಗಳು, ಸಂಗೀತಗಾರರರು, ಸುಸಂಸ್ಕೃತರು ಧಾರವಾಡದ ಹೆಸರನ್ನು ವಿಶ್ವದಲ್ಲಿ ಬೆಳಗಿದ್ದಾರೆ. ಆದರೆ ಧಾರವಾಡ ಇದೀಗ ದೋ ನಂಬರ ದಂಧೆಗೆ ಹೇಳಿ ಮಾಡಿಸಿದ ನಗರ ಎಂಬ ಹೆಗ್ಗಳಿಕೆಗೆ ಹೆಸರಾಗಿದೆ. ಅದರಲ್ಲೂ ಧಾರವಾಡ ಶಹರ ಠಾಣೆ ವ್ಯಾಪ್ತಿ ಅವರ ಪಾಲಿಗೆ ಬಹಳ ಸುರಕ್ಷಿತ ತಾಣವಾಗಿದೆ.

ಧಾರವಾಡ ಶಹರ ಠಾಣೆ  ವ್ಯಾಪ್ತಿಯ   ಕೆಲವು ಲಾಡ್ಜ್ ಗಳಲ್ಲಿ ಚರ್ಮ ದಂಧೆ ಜೋರಾಗಿದೆ. ಯೌವನ,  ಹಾದಿ ತಪ್ಪುತ್ತಿದೆ. ಪೊಲೀಸರಿಗೂ ಈ ವಿಷಯ ಗೊತ್ತಿಲ್ಲ ಅಂತಿಲ್ಲ. ಅವರಿಗೆ ಎಲ್ಲವೂ ಗೊತ್ತಿದೆ.

ಧಾರವಾಡ ಶಹರ ಠಾಣೆ ಜನರ ನಂಬಿಕೆ ಕಳೆದುಕೊಳ್ಳುತ್ತಿದ್ದು, ಮೀಟರ್ ಬಡ್ಡಿ ವ್ಯವಹಾರ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.

ಧಾರವಾಡದ ಮಾನ ಮರ್ಯಾದೆ ಕಾಪಾಡಬೇಕಾದರೆ, ಹಿರಿಯ ಪೊಲೀಸ್ ಅಧಿಕಾರಿಗಳು, ಗೃಹ ಸಚಿವರ ಗಮನಕ್ಕೆ ಬರುವ ಮುನ್ನ ಕೆಲ ಬದಲಾವಣೆ ಮಾಡಬೇಕಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ನಿಮ್ಮ ಮುಂದಿನ ಪಯಣ ಮತ್ತಷ್ಟು ಯಶಸ್ವಿಯಾಗಲಿ

ಎನ್ ಶಶಿಕುಮಾರ ಹುಬ್ಬಳ್ಳಿಗೆ ಕಮಿಷನರ್ ಆಗಿ ಬಂದಂತ ಸಮಯದಲ್ಲಿ ಅನೇಕ ಸವಾಲುಗಳು ಅವರ ಬೆನ್ನಿಗೇರಿದ್ದವು.  ಅವರ ಬಗ್ಗೆ, ಅವರ ಕೆಲಸದ ಸ್ಟೈಲ್ ಬಗ್ಗೆ, ಅವರು ಅಧಿಕಾರ ಸ್ವೀಕರಿಸುವದಕ್ಕೂ

Live Cricket

error: Content is protected !!