ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮುಸ್ಲಿಂ ಸಮುದಾಯದ ಪ್ರಭಾವಿ ನಾಯಕ ಜಮೀರ್ ಅಹ್ಮದ್ ಖಾನ್ ನಡುವೆ ಸಂಬಂಧ ಹಳಸಿದೆ ಎಂಬುದಕ್ಕೆ ಇಂದು ಮೈಸೂರಿನಲ್ಲಿ ಸಿದ್ದರಾಮಯ್ಯನವರ ಮಗ ಯತಿಂದ್ರ ನೀಡಿದ ಹೇಳಿಕೆ ಸಾಕ್ಷಿಯಾಗಿದೆ.
ಮಂತ್ರಿ ಸ್ಥಾನಕ್ಕೆ ಹೈಕಮಾಂಡನವರಿಗೆ ಕೊಟ್ಟ ಪಟ್ಟಿಯಲ್ಲಿ ಜಮೀರ್ ಅಹ್ಮದ್ ಖಾನ್ ಹೆಸರು ಇರಲಿಲ್ಲ ಎಂಬುದನ್ನು ಖುದ್ದು ಸಿದ್ದರಾಮಯ್ಯನವರ ಸುಪುತ್ರ ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು ನಮ್ಮ ತಂದೆ ಹೈಕಮಾಂಡಗೆ 14 ಜನರ ಹೆಸರು ಕೊಟ್ಟಿದ್ದರು, ಆ ಪೈಕಿ ಮಹಾದೇವಪ್ಪನವರ ಹೆಸರು ಮೊದಲಿಗೆ ಇತ್ತು ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ತನ್ವಿರ್ ಸೇಠ ರಿಗೆ ಸಚಿವ ಸ್ಥಾನ ಕೊಡಬಹುದಿತ್ತು. ಆದರೆ ಇದರಲ್ಲಿ ಸಿದ್ದರಾಮಯ್ಯನವರ ಪಾತ್ರವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಜಮೀರ್ ಅಹ್ಮದ್ ಖಾನ್ ಹಾಗೂ ಸಿದ್ದರಾಮಯ್ಯನವರ ನಡುವೆ ಕಂದಕ ಸೃಷ್ಟಿಯಾಗಿರುವದು ಇದೀಗ ಬಹಿರಂಗಗೊಂಡಿದ್ದು, ಅಹಿಂದ ವರ್ಗದ ಒಗ್ಗಟ್ಟಿನ ಮೇಲೆ ಕರಿನೆರಳು ಬಿದ್ದಂತಾಗಿದೆ.
Author: Karnataka Files
Post Views: 593





