ಧಾರವಾಡದ ಹೋಟೆಲ್ ಒಂದರ ಮುಂದೆ ಹಾಕಲಾಗಿದ್ದ ಹೀಗೊಂದು ಬೋರ್ಡ್ ಇದೀಗ ಮೊಬೈಲ್ ನಿಂದ ಮೊಬೈಲ್ ಗೆ ರವಾನೆಯಾಗುತ್ತಿದೆ.
ನಿಜಕ್ಕೂ ಹೋಟೆಲ್ ಹೊಯ್ಸಳ ದವರು ಇದನ್ನು ಹಾಕಿದ್ರಾ? ಹಾಗೊಮ್ಮೆ ಹಾಕಿದ್ರೆ, ಹೋಟೆಲ್ ಮಾಲೀಕರಾಗಲಿ ಅಥವಾ ಇನ್ಸಪೆಕ್ಟರ್ ಅವರಾಗಲಿ ತನಿಖೆ ಎದುರಿಸಲೇಬೇಕು.
ಬೆಳಿಗ್ಗೆಯಿಂದ ಕರ್ತವ್ಯ ಆರಂಭಿಸಿ ಸುಗಮ ಸಂಚಾರ ವ್ಯವಸ್ಥೆ ಮಾಡುವ, ಸಂಚಾರಿ ಪೋಲೀಸರ ನೈತಿಕತೆ ಕುಗ್ಗಿಸುವ ಕೆಲಸ ಆಗಬಾರದು.
ಹೋಟೆಲ್ ಮುಂದೆ ಪಾರ್ಕಿಂಗ್ ನಿಷೇಧ ಮಾಡಿದ್ದಕ್ಕೆ ಕೋಪಗೊಂಡು, ಹೋಟೆಲ್ ಸಿಬ್ಬಂದಿ ಈ ತರಹ ಸಂಚಾರಿ ಠಾಣೆಯ ಇನ್ಸಪೆಕ್ಟರ್ ಶ್ರೀನಿವಾಸ್ ಮೇಟಿಯವರ ಮೇಲೆ ಆರೋಪ ಹೊರಿಸಿದ್ದಾರೆ ಎನ್ನಲಾಗಿದೆ.
ಇದು ಸತ್ಯವೋ ಅಥವಾ ಸುಳ್ಳಿನಿಂದ ಕುಡಿದೆಯೋ ಒಟ್ನಲ್ಲಿ ತನಿಖೆಯಾಗಬೇಕು.
ಈ ತರಹ ಬೋರ್ಡ್ ನೇತು ಹಾಕಿದ್ದರಿಂದ ಸಂಚಾರಿ ಪೋಲೀಸ ಅಧಿಕಾರಿಗಳ ಮೇಲೆ ಜನ ಸಂಶಯ ಮಾಡಿಕೊಂಡು ಮರ್ಯಾದೆ ಹರಾಜಾಗುವ ಹಂತಕ್ಕೆ ಬಂದಿದೆ.
ಈಗ ಆ ಬೋರ್ಡ್ ಅಲ್ಲಿಂದ ತೆರವುಗೊಳಿಸಿದ್ದಾರೆ ಎನ್ನಲಾಗಿದ್ದು, ಸಾರ್ವಜನಿಕರು ದೂರು ನೀಡಿದ್ದರಿಂದ ಹೋಟೆಲ್ ಹೊಯ್ಸಳ ಎದುರು ಪಾರ್ಕಿಂಗ ನಿಷೇಧ ಮಾಡಲಾಗಿದೆಯಂತೆ.
ಪಾರ್ಕಿಂಗ್ ನಿಷೇಧ ಮಾಡಿದ್ದಕ್ಕೆ ಹೀಗೆ ಆರೋಪ ಮಾಡುವದಾದರೆ, ಮುಂದೆ ನಡೆಯುವ ಅನಾಹುತಗಳಿಗೆ ಯಾರು ಹೊಣೆ?





