ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ತಾಜ್ ಹೋಟೆಲ್ನಲ್ಲಿ ಎಸ್ಜಿ ಇಮ್ರಾನ್ ಎಂಬ ವ್ಯಕ್ತಿ ತನ್ನ 5 ವರ್ಷದ ಶೇಕ್ ಜೆಹರಾ ಮತ್ತು 10 ವರ್ಷದ ಮಗಳು ಶೇಕ್ ಜೋಯಾ ಅವರನ್ನು ಕತ್ತು ಹಿಸುಕಿ ಕೊಂದಿದ್ದಾನೆ.
ನಂತರ ತಾನು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ತಿಳಿದು ಬಂದಿದೆ.
ಗಂಡ ಮತ್ತು ಹೆಂಡತಿಯ ನಡುವೆ ವೈವಾಹಿಕ ವೈಮನಸ್ಸುಗಳು ಈ ಘಟನೆಗೆ ಕಾರಣ ಎಂದು ಹೇಳಲಾಗಿದೆ.
ತನ್ನ ಹೆಂಡತಿ ಪರ ಪುರುಷನೊಂದಿಗೆ ಸಂಬಂಧ ಹೊಂದಿದ್ದರ ಬಗ್ಗೆ ಅನುಮಾನ ಪಟ್ಟಿದ್ದ ಎನ್ನಲಾಗಿದೆ.
ಈ ನಡುವೆ ತನ್ನ ಮಕ್ಕಳು ತಮ್ಮ ತಾಯಿಯೊಂದಿಗೆ ಬೆಳೆಯುವುದು ತನಗೆ ಇಷ್ಟವಿಲ್ಲ ಎಂದು ಆರೋಪಿ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆತನಿಂದ ಒಂದು ಪತ್ರವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.
ತನ್ನ ಇಬ್ಬರು ಮಕ್ಕಳನ್ನು ಹತ್ಯೆ ಮಾಡಿದ ನಂತರ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಹೇಳಲಾದ ಇಮ್ರಾನ್ ಪ್ರಸ್ತುತ ಅಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
Author: Karnataka Files
Post Views: 248





