Download Our App

Follow us

Home » ರಾಜಕೀಯ » ನವಲಗುಂದ ವಿಧಾನಸಭಾ ಕ್ಷೇತ್ರ : ಈ ಬಾರಿ ಕಣದಲ್ಲಿ ಇರ್ತಾರಾ ವಿನೋದ ಅಸೂಟಿ !

ನವಲಗುಂದ ವಿಧಾನಸಭಾ ಕ್ಷೇತ್ರ : ಈ ಬಾರಿ ಕಣದಲ್ಲಿ ಇರ್ತಾರಾ ವಿನೋದ ಅಸೂಟಿ !

ರೈತ ಬಂಡಾಯದ ನಾಡು ನವಲಗುಂದ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಅಂಗಳದಲ್ಲಿ 2028 ರ ಚುನಾವಣೆಗೆ ಈಗಿನಿಂದಲೇ ತಯಾರಿ ನಡೆದಿದೆ. 

ಚುನಾವಣೆಗೆ ಇನ್ನು ಒಂದು ವರ್ಷ ಒಂಬತ್ತು ತಿಂಗಳು ಬಾಕಿ ಇರುವಾಗ ವಿನೋದ ಅಸೂಟಿ ಈ ಬಾರಿ ಕಣದಲ್ಲಿ ಇರ್ತಾರೆ ಅನ್ನೋ ಚರ್ಚೆಗಳು ಆರಂಭವಾಗಿವೆ. 

ಜೆಡಿಎಸ್ ತೊರೆದು ಕಾಂಗ್ರೇಸ್ ಪಕ್ಷ ಸೇರಿದ ನಂತರ 2023 ರ ಸಾರ್ವತ್ರಿಕ ಚುನಾವಣೆಯಲ್ಲಿ ಜೋಡೆತ್ತುಗಳಂತೆ ಕಂಡು ಬಂದಿದ್ದ ಹಾಲಿ ಶಾಸಕ ಎನ್ ಎಚ್ ಕೋನರೆಡ್ಡಿ ಹಾಗೂ ವಿನೋದ ಅಸೂಟಿ, ಕ್ಷೇತ್ರದಲ್ಲಿ ಕಾಂಗ್ರೇಸ್ ಬಾವುಟ ಹಾರಿಸಿದ್ದು ಇತಿಹಾಸ. 

ತದನಂತರ ನಡೆದ ಬೆಳವಣಿಗೆಗಳು ಇಬ್ಬರನ್ನು ದೂರ ಮಾಡಿವೆ. ವಿನೋದ ಅಸೂಟಿ ಹಾಗೂ ಅವರ ಬೆಂಬಲಿಗರ ಅಸಮಾಧಾನಕ್ಕೆ ಕಾರಣವಾಗುವ ಕೆಲವೊಂದು ಬೆಳವಣಿಗೆಗಳು ನಡೆದಿವೆ.

ನಮ್ಮ ಹೊಲ ನಮ್ಮ ರಸ್ತೆ ಯೋಜನೆಯಡಿ ಹೊಲದ ದಾರಿ ನಿರ್ಮಿಸಿರುವ ಕೋನರೆಡ್ಡಿಯವರು, ಕ್ಷೇತ್ರದ ಅಭಿವೃದ್ಧಿಗೆ ಮತೊಮ್ಮೆ ಅವಕಾಶ ಮಾಡಿಕೊಡಿ ಎಂದು ಕೇಳುತ್ತಿದ್ದಾರೆ.

ಮತ್ತೊಂದೆಡೆ ವಿನೋದ ಅಸೂಟಿ ಬೆಂಬಲಿಗರು, ಕೋನರೆಡ್ಡಿಯವರು, ಗೆದ್ದು ಶಾಸಕರಾದ ಬಳಿಕ ತಮ್ಮ ನಾಯಕ ವಿನೋದ ಅಸೂಟಿಯವರನ್ನು ನಿರ್ಲಕ್ಷ ಮಾಡಿದ್ದಾರೆ ಅನ್ನೋ ಆಕ್ರೋಶ ಮಡುಗಟ್ಟಿದೆ.

ಇಬ್ಬರು ನಾಯಕರ ಮದ್ಯೆ ಈಗ ಹೊಂದಾಣಿಕೆಯಾಗದಷ್ಟು ವೈಮನಸ್ಸು ಉಲ್ಬಣಗೊಂಡಿದೆ. 

ವಿನೋದ ಅಸೂಟಿಯವರಿಗೆ ಈ ಸಲ ಕಾಂಗ್ರೇಸ್ ಪಕ್ಷದ ಟಿಕೆಟ್ ಕೊಡಲೇಬೇಕು ಎಂದು ಅವರ ಅಭಿಮಾನಿಗಳು ಪಟ್ಟು ಹಿಡಿದಿದ್ದಾರೆ.

2028 ರ ವಿಧಾನಸಭೆ ಚುನಾವಣೆ, ಸಾಕಷ್ಟು ಜಿದ್ದಾಜಿದ್ದಿಗೆ ಕಾರಣವಾಗಲಿದ್ದು, ವಿನೋದ ಅಸೂಟಿಯವರುಸಲ ಕಣದಲ್ಲಿ ಇರ್ತಾರಾ ಅನ್ನೋದಕ್ಕೆ ಕಾಲವೇ ಉತ್ತರ ಹೇಳಲಿದೆ

Karnataka Files
Author: Karnataka Files

Leave a Comment

RELATED LATEST NEWS

Top Headlines

ನಿಮ್ಮ ಮುಂದಿನ ಪಯಣ ಮತ್ತಷ್ಟು ಯಶಸ್ವಿಯಾಗಲಿ

ಎನ್ ಶಶಿಕುಮಾರ ಹುಬ್ಬಳ್ಳಿಗೆ ಕಮಿಷನರ್ ಆಗಿ ಬಂದಂತ ಸಮಯದಲ್ಲಿ ಅನೇಕ ಸವಾಲುಗಳು ಅವರ ಬೆನ್ನಿಗೇರಿದ್ದವು.  ಅವರ ಬಗ್ಗೆ, ಅವರ ಕೆಲಸದ ಸ್ಟೈಲ್ ಬಗ್ಗೆ, ಅವರು ಅಧಿಕಾರ ಸ್ವೀಕರಿಸುವದಕ್ಕೂ

Live Cricket

error: Content is protected !!