Download Our App

Follow us

Home » ರಾಜಕೀಯ » ಸ್ವಾತಂತ್ರ್ಯ ನಮ್ಮ ಬದುಕನ್ನು ಉತ್ತಮಗೊಳಿಸಲು ಸಿಕ್ಕ ಅವಕಾಶ: ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ

ಸ್ವಾತಂತ್ರ್ಯ ನಮ್ಮ ಬದುಕನ್ನು ಉತ್ತಮಗೊಳಿಸಲು ಸಿಕ್ಕ ಅವಕಾಶ: ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ

 

ಸ್ವಾತಂತ್ರ್ಯ ಸಿಕ್ಕಿರುವುದು ನಮ್ಮ ಜೀವನವನ್ನು ಉತ್ತಮಗೊಳಿಸಲು ಹೊರತು, ದೇಶಾಭಿಮಾನವನ್ನು ಮರೆತು ಬದುಕು ನಡೆಸುವುದಕ್ಕಲ್ಲ ಎಂದು ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಹೇಳಿದರು.

ಹುಬ್ಬಳ್ಳಿ ತಾಲೂಕಿನ ಕಿರೇಸೂರ ಗ್ರಾಮದಿಂದ ನವಲಗುಂದ ಪಟ್ಟಣದವರೆಗೆ 79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಬೈಕ್ ರ‍್ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ದೇಶದ ಮೇಲಿನ ಅಭಿಮಾನ ಪ್ರತಿಕ್ಷಣವೂ ಹೆಚ್ಚಾಗಬೇಕು. ಸ್ವಾತಂತ್ರ್ಯದ ನಿಜವಾದ ಅರ್ಥವನ್ನು ಅರಿತು, ದೇಶದ ಪ್ರಗತಿಗೆ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡಬೇಕು. ದೇಶಭಕ್ತಿ ಕೇವಲ ಒಂದು ದಿನಕ್ಕೆ ಸೀಮಿತವಾಗದೆ, ಪ್ರತಿದಿನದ ಬದುಕಿನ ಭಾಗವಾಗಬೇಕು ಎಂದು ಕರೆ ನೀಡಿದರು.

ಸಂದರ್ಭದಲ್ಲಿ ನೂರಾರು ಕಾರ್ಯಕರ್ತರು ಬೈಕ್ ರ‍್ಯಾಲಿಯಲ್ಲಿ ಭಾಗವಹಿಸಿದ್ದರು. ಕಿರೇಸೂರ ಗ್ರಾಮದಿಂದ ಆರಂಭಗೊಂಡ ರ‍್ಯಾಲಿಯು ಹೆಬಸೂರ, ಕರ್ಲವಾಡ, ಕಾಲವಾಡ, ಆರೇಕುರಹಟ್ಟಿ ಹಾಗೂ ಯಮನೂರ ಮಾರ್ಗವಾಗಿ ಸಂಚರಿಸಿ, ಬಳಿಕ ನವಲಗುಂದ ಪಟ್ಟಣ ಪ್ರವೇಶಿಸಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ರ‍್ಯಾಲಿ ಸಂಚರಿಸಿತು.

ರ‍್ಯಾಲಿಯಲ್ಲಿ ಗಂಗಪ್ಪ ಮನಮಿ, ಷಣ್ಮುಖ ಗುರಿಕಾರ, ಮಂಜುನಾಥ ಗಣಿ, ರೋಹಿತ ಮತ್ತಿಹಳ್ಳಿ, ಸಿದ್ಧನಗೌಡ ಪಾಟೀಲ, ರಾಜುಗೌಡ ಪಾಟೀಲ, ಶಿವಣ್ಣ ಶೆಟ್ಟರ, ಯಲ್ಲಪ್ಪ ಗಣಿ, ಸದಾನಂದ ಗಾಳಪ್ಪನವರ, ಪ್ರಭು ಬುಳಗಣ್ಣನವರ, ಅರುಣ ಮೆಣಸಿನಕಾಯಿ, ದುಂಡಪ್ಪ ಶೆಟ್ಟರ್, ಮಂಜು ಗಡಿಯಣ್ಣನವರ, ಸಂತೋಷ ಜೀವನಗೌಡ್ರ, ಸೋಮು ಪಟ್ಟಣಶೆಟ್ಟಿ, ಫಕ್ಕೀರಪ್ಪ (ಮುತ್ತು) ಚಾಕಲಬ್ಬಿ, ಅಶೋಕ ಮಂಡಗಾಳ, ಸುರೇಶ ಬಣವಿ, ಆನಂದ ಚವಡಿ, ಮಲ್ಲಪ್ಪ ಹಳಕಟ್ಟಿ, ರುದ್ರಪ್ಪ ದುಂಡೂರ, ನಾಗರಾಜ ಕಾಳಿ, ವೀರನಗೌಡ ಪಾಟೀಲ, ಮಂಜು ಗುಡೇನಕಟ್ಟಿ, ಪ್ರವೀಣ ನಾಗರಳ್ಳಿ, ಬಸವರಾಜ ಕಾತರಕಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Karnataka Files
Author: Karnataka Files

Leave a Comment

RELATED LATEST NEWS

Top Headlines

ನಿಮ್ಮ ಮುಂದಿನ ಪಯಣ ಮತ್ತಷ್ಟು ಯಶಸ್ವಿಯಾಗಲಿ

ಎನ್ ಶಶಿಕುಮಾರ ಹುಬ್ಬಳ್ಳಿಗೆ ಕಮಿಷನರ್ ಆಗಿ ಬಂದಂತ ಸಮಯದಲ್ಲಿ ಅನೇಕ ಸವಾಲುಗಳು ಅವರ ಬೆನ್ನಿಗೇರಿದ್ದವು.  ಅವರ ಬಗ್ಗೆ, ಅವರ ಕೆಲಸದ ಸ್ಟೈಲ್ ಬಗ್ಗೆ, ಅವರು ಅಧಿಕಾರ ಸ್ವೀಕರಿಸುವದಕ್ಕೂ

Live Cricket

error: Content is protected !!