Download Our App

Follow us

Home » ಕಾನೂನು » ಪ್ರಧಾನಮಂತ್ರಿ ಫಸಲ ಭೀಮಾ ಯೋಜನೆ : ಸಂತೋಷ ಲಾಡ್ ರ ಕ್ಷೇತ್ರದಲ್ಲಿ 9 ಕೋಟಿ ವಂಚನೆ

ಪ್ರಧಾನಮಂತ್ರಿ ಫಸಲ ಭೀಮಾ ಯೋಜನೆ : ಸಂತೋಷ ಲಾಡ್ ರ ಕ್ಷೇತ್ರದಲ್ಲಿ 9 ಕೋಟಿ ವಂಚನೆ

ಪ್ರಧಾನ ಮಂತ್ರಿ ಫಸಲ ಭೀಮಾ ಯೋಜನೆಯಡಿ ಅರ್ಹ ರೈತರಿಗೆ ಸಿಗಬೇಕಾದ ವಿಮೆ ಹಣ ಏಜೆಂಟರ ಪಾಲಾಗಿದೆ. 

ತಬಕದಹೊನ್ನಳ್ಳಿ ಹೋಬಳಿಯೊಂದರಲ್ಲಿಯೇ 9 ಕೋಟಿಯಷ್ಟು ವಿಮೆ ಹಣ ವಂಚನೆಯಾಗಿದೆ. 

ಕಬ್ಬು ಬೆಳೆದ ಹೊಲದಲ್ಲಿ ಗೋವಿನಜೋಳದ ಬೆಲೆ ತೋರಿಸಿ ಗೋಲ್ಮಾಲ್ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಇದರಲ್ಲಿ ಏಜನ್ಸಿ ಯವರು ಭಾಗಿಯಾಗಿದ್ದಾರೆ ಎನ್ನಲಾಗಿದೆ. 

ಗೋವಿನಜೋಳ ಬೆಳೆ ತೋರಿಸಿದವರಿಗೆ ಪ್ರತಿ ಎಕರೆಗೆ 12 ಸಾವಿರ ರೂಪಾಯಿ ವಿಮೆ ಹಣ ಹಾಕಲಾಗಿದ್ದು, ಇದರಲ್ಲಿ ಏಜೆಂಟ್ ರು, ಏಜನ್ಸಿಯವರಿಗೆ ಅರ್ಧ ಪಾಲು ಹೋಗಿದ್ದರ ಬಗ್ಗೆ ಇದೀಗ ದೂರು ಧಾಖಲಾಗಿದೆ. 

ಏಜೆಂಟ್ ರೆ ಮುಂದೆ ನಿಂತು ರೈತರಿಂದ ವಿಮೆ ಹಣ ತುಂಬಿಸಿ, ಕರಾರು ಮಾಡಿಕೊಂಡಿದ್ದರ ಬಗ್ಗೆ ದೂರು ಧಾಖಲಾಗಿದೆ. 

ಧಾರವಾಡದ ಸೈಬರ್ ಠಾಣೆಯಲ್ಲಿ ದೂರು ಧಾಖಲಾಗಿದ್ದು, ತನಿಖೆ ಚುರುಕುಗೊಂಡಿದೆ. 

ಈ ಹಗರಣದಲ್ಲಿ ಅಧಿಕಾರಿಗಳು ಶಾಮೀಲಾಗಿದ್ದು, ಅವರನ್ನು ಸಹ ತನಿಖೆಗೆ ಒಳಪಡಿಸಲಾಗಿದೆ.

 

ಏನಿದು ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ 

ಪ್ರಧಾನಮಂತ್ರಿ ಫಸಲ ಭೀಮಾ ಯೋಜನೆ (PMFBY) ಎಂಬುದು ಪ್ರಾಕೃತಿಕ ವಿಕೋಪಗಳು, ಕೀಟಗಳು ಮತ್ತು ರೋಗಗಳಿಂದ ಬೆಳೆ ಹಾನಿಗೊಳಗಾದ ರೈತರಿಗೆ ಆರ್ಥಿಕ ಭದ್ರತೆ ಮತ್ತು ವಿಮಾ ರಕ್ಷಣೆ ಒದಗಿಸುವ ಕೇಂದ್ರ ಸರ್ಕಾರದ ಬೆಳೆ ವಿಮಾ ಯೋಜನೆಯಾಗಿದೆ.

ಯೋಜನೆಯ ಪ್ರಮುಖ ಲಕ್ಷಣಗಳು ಮತ್ತು ಪ್ರಯೋಜನಗಳು

                ಕೈಗೆಟುಕುವ ಪ್ರೀಮಿಯಂ

ರೈತರು ಖಾರಿಫ್ ಬೆಳೆಗಳಿಗೆ ಶೇ. 2, ರಬಿ ಬೆಳೆಗಳಿಗೆ ಶೇ. 1.5 ಮತ್ತು ವಾಣಿಜ್ಯ/ತೋಟಗಾರಿಕೆ ಬೆಳೆಗಳಿಗೆ ಶೇ. 5 ರಷ್ಟು ಕಡಿಮೆ ಪ್ರೀಮಿಯಂ ಮಾತ್ರ ಪಾವತಿಸಬೇಕು. ಉಳಿದ ವಿಮಾ ಮೊತ್ತವನ್ನು ಸರ್ಕಾರ ಭರಿಸುತ್ತದೆ

ಬೆಳೆ ರಕ್ಷಣೆ, ಬಿತ್ತನೆ ವಿಫಲತೆ, ಅನಿರೀಕ್ಷಿತ ಮಳೆ ಕೊರತೆ, ಮುಂಗಾರು ವೈಫಲ್ಯ, ಸ್ಥಳೀಯ ವಿಪತ್ತುಗಳು ಮತ್ತು ಕೊಯ್ಲಿನ ನಂತರದ ಹಾನಿಗೆ ಪರಿಹಾರಯೋಜನೆ ಮೂಲಕ ದೊರೆಯುತ್ತದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ನಿಮ್ಮ ಮುಂದಿನ ಪಯಣ ಮತ್ತಷ್ಟು ಯಶಸ್ವಿಯಾಗಲಿ

ಎನ್ ಶಶಿಕುಮಾರ ಹುಬ್ಬಳ್ಳಿಗೆ ಕಮಿಷನರ್ ಆಗಿ ಬಂದಂತ ಸಮಯದಲ್ಲಿ ಅನೇಕ ಸವಾಲುಗಳು ಅವರ ಬೆನ್ನಿಗೇರಿದ್ದವು.  ಅವರ ಬಗ್ಗೆ, ಅವರ ಕೆಲಸದ ಸ್ಟೈಲ್ ಬಗ್ಗೆ, ಅವರು ಅಧಿಕಾರ ಸ್ವೀಕರಿಸುವದಕ್ಕೂ

Live Cricket

error: Content is protected !!