ಧಾರವಾಡದ ಆರ್ ಎನ್ ಶೆಟ್ಟಿ ಕ್ರೀಡಾಂಗಣದಲ್ಲಿ ನಡೆದ 80 ನೇ ಸ್ವಾತಂತ್ರೋತ್ಸವದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ದ್ವಜಾರೋಹಣ ನೆರವೇರಿಸಿದರು.
ವಿವಿಧ ದಳಗಳಿಂದ ಗೌರವ ಶ್ರೀರಕ್ಷೆ ಸ್ವೀಕರಿಸಿದ ಬಳಿಕ ಮಾತನಾಡಿದ ಸಂತೋಷ ಲಾಡ್ ಅವರು ಸರ್ಕಾರ ಜಾರಿಗೆ ತಂದ ಕಾರ್ಯಕ್ರಮಗಳ ಪಟ್ಟಿ ಓದಿದರು.
ಆದರೆ, ಅವರ ಭಾಷಣದಲ್ಲಿ ಧಾರವಾಡ ಜಿಲ್ಲೆಯ ಪ್ರಗತಿಯ ದಿಕ್ಸುಚಿ ಇರದೇ ಇರುವದು ಕಂಡು ಬಂತು.
ಧಾರವಾಡ ಜಿಲ್ಲೆಯಲ್ಲಿ ಎದುರಾದ ಬರಗಾಲ, ಕುಡಿಯುವ ನೀರಿನ ಸಮಸ್ಯೆ, ಅವಳಿ ನಗರದ ಅಭಿವೃದ್ಧಿ, ಸೇರಿದಂತೆ, ಧಾರವಾಡ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಒಂದೇ ಒಂದು ಅಂಶ ಭಾಷಣದಲ್ಲಿ ಪ್ರಸ್ತಾಪ ಮಾಡದಿರುವದು ಕಂಡು ಬಂತು.
Author: Karnataka Files
Post Views: 130





