ಬೆಂಗಳೂರಿನ ರಾಜೇಶ್ವರಿ ನಗರದಲ್ಲಿ ಹುಬ್ಬಳ್ಳಿ ಮೂಲದ ಯುವತಿ ಪದ್ಮಾವತಿ ಎಂಬಾಕೆಯನ್ನು ಆಕೆಯ ಗಂಡ ಸುಮಂತ ಎಂಬಾತ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ನಡೆದಿದೆ.
ಪತ್ನಿ ಸಾವನ್ನಪ್ಪಿದ್ದನ್ನು ಖಚಿತಪಡಿಸಿಕೊಂಡ ಬಳಿಕ ಸುಮಂತ ತಾನು ಸಹ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬೆಳ್ತಂಗಡಿ ಮೂಲದ ಸುಮಂತ ಹಾಗೂ ಹುಬ್ಬಳ್ಳಿ ಮೂಲದ ಪದ್ಮಾವತಿ ನಾಲ್ಕು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು ಎಂದು ಹೇಳಲಾಗಿದೆ.
ಇಬ್ಬರ ನಡುವೆ ಆಗಾಗ ಕೌಟುಂಬಿಕ ಕಲಹ ನಡೆಯುತ್ತಿತ್ತು ಎಂದು ಪ್ರಾಥಮಿಕವಾಗಿ ತಿಳಿದು ಬಂದಿದೆ.
ಪತ್ನಿಯನ್ನು ಕೊಲೆ ಮಾಡಿದ ಬಳಿಕ ಸುಮಂತ, ತಾನು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ, ತನ್ನ ತಾಯಿಗೆ ಕರೆ ಮಾಡಿ ಪಿ ಎಫ್ ಹಣ ಹಾಗೂ ಮನೆಯ ವಿಚಾರ ಪ್ರಸ್ತಾಪಿಸಿದ್ದ ಎನ್ನಲಾಗಿದೆ.
ವೃತ್ತಿಯಿಂದ ಇಬ್ಬರು ಇಂಜಿನಿಯರ್ ಆಗಿದ್ದು, ಈ ಘಟನೆ ಆತಂಕಕ್ಕೆ ಕಾರಣವಾಗಿದೆ.
Author: Karnataka Files
Post Views: 562





